ಫೆಬ್ರವರಿಯಲ್ಲಿ ಮಾಲಿವುಡ್​​ ಮೆಗಾಸ್ಟಾರ್ ಫ್ಯಾನ್ಸ್​ಗೆ​ ಡಬಲ್ ಧಮಾಕಾ!

Untitled design - 2023-10-10T134438.436
Published on

ಕೇರಳ: ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಬಹುನಿರೀಕ್ಷಿತ 'ಕಣ್ಣೂರು ಸ್ಕ್ವಾಡ್‌' ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಾಕ್ಸ್​ ಆಫೀಸ್​​ನಲ್ಲಿ ಸಹ ನಿರೀಕ್ಷಿಸಿದಂತೆ ಗಳಿಕೆ ಕಾಣುತ್ತಿದೆ. ಈ ಸಂಭ್ರಮದಲ್ಲಿರುವ ಮೆಗಾಸ್ಟಾರ್​ ಅಭಿಮಾನಿಗಳೀಗೆ ಇದೀಗ 2024ರ ಫೆಬ್ರವರಿಯಲ್ಲಿ ಡಬಲ್​ ಧಮಾಕಾ ದೊರೆಯುವ ಮುನ್ಸೂಚನೆಯೊಂದು ಲಭಿಸಿದೆ.

'ಕಣ್ಣೂರು ಸ್ಕ್ವಾಡ್‌' ಚಿತ್ರ ಉತ್ತಮ ಪ್ರದರ್ಶನ ಪಡೆಯುತ್ತಿದ್ದಂತೆ, ಇದರ ಬೆನ್ನಲ್ಲೇ ನಟನ ಮುಂದಿನ ಎರಡು ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ತೆಲುಗು ಭಾಷೆಯ 'ಯಾತ್ರಾ 2' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಗೊಂಡಿದೆ.

ಮಮ್ಮುಟ್ಟಿ ಅವರ ಮುಂದಿನ ಮಲಯಾಳಂ ಚಿತ್ರ 'ಬಾಜೂಕಾ' ಇದೇ ಫೆಬ್ರವರಿ 16, 2024 ರಂದು ಚಿತ್ರಮಂದಿರಗಳನ್ನು ಪ್ರವೇಶಿಸಲಿದೆ ಎಂಬ ಸುದ್ದಿ ಸದ್ಯ ಮಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈ ವದಂತಿ ಅಧಿಕೃತಗೊಂಡರೆ 2024ರ ಫೆಬ್ರವರಿ ತಿಂಗಳು ಮೆಗಾಸ್ಟಾರ್​ ಅಭಿಮಾನಿಗಳಿಗೆ ಡಬಲ್​ ಧಮಾಕಾ ದೊರೆಯುವುದು ಖಚಿತ.

'ಯಾತ್ರಾ 2' ಫೆಬ್ರವರಿ 8, 2024 ಮತ್ತು 'ಬಾಜೂಕಾ' ಫೆಬ್ರವರಿ 16 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೊರಬೀಳುವ ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ.

ಬಾಜೂಕಾ ಚಿತ್ರವನ್ನು ಡೀನೋ ಡೆನ್ನಿಸ್ ನಿರ್ದೇಶಿಸಲಿದ್ದು, ಗೌತಮ್ ವಾಸುದೇವ್ ಮೆನನ್, ಟಾಮ್ ಶೈನ್ ಚಾಕೊ, ಸುಮಿತ್ ನಾವೆಲ್, ಮತ್ತು ಸಿದ್ಧಾರ್ಥ್ ಭರತನ್ ಮುಂತಾದವರು ಈ ಹೈ-ಬಜೆಟ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net