'Modi and US': ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

ವಿಜಯವಾಣಿ - 2024-09-22T223408.965
Published on

| ಬೆಂಕಿ ಬಸಣ್ಣ, ನ್ಯೂಯಾರ್ಕ್​

ಸತತವಾಗಿ ಮೂರನೇ ಬಾರಿಗೆ ಲೋಕಸಭೆ ಚುನಾವಣೆ ಗೆದ್ದು ಪ್ರಧಾನ ಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾಗೆ ಭೇಟಿ ನೀಡಿರುವ ನರೇಂದ್ರ ಮೋದಿ ಅವರಿಗೆ ನ್ಯೂಯಾರ್ಕ್​ನ ನಾಸಾ ಕೌಂಟಿಯ ದೊಡ್ಡ ಸ್ಟೇಡಿಯಂನಲ್ಲಿ 13,000ಕ್ಕೂ ಹೆಚ್ಚು ಭಾರತೀಯರು ಸೇರಿ ಅದ್ಧೂರಿ ಸ್ವಾಗತ ಕೋರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದ್ದು, ಈ ಸಂಪೂರ್ಣ ಈವೆಂಟ್​ ಅನ್ನು ಕೇವಲ ಮೂರು ವಾರಗಳಲ್ಲಿ ಮಾಡಲಾಗಿದೆ. ಪ್ರಧಾನಿಗಳು ಆಗಮಿಸುವ ಮೂರ್ನಾಲ್ಕು ಗಂಟೆಗೂ ಮುನ್ನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.

ಇದರಲ್ಲಿ 500 ವಿವಿಧ ಭಾರತದ ಸಂಘ ಸಂಸ್ಥೆಗಳು ಭಾಗವಹಿಸಿವೆ. ಕನ್ನಡದ ಕೂಟಗಳು ಪಾಲ್ಗೊಂಡಿವೆ. ಕರ್ನಾಟಕದ ಯಕ್ಷಗಾನ, ಹುಲಿ ವೇಷದ ನೃತ್ಯಗಳು ಚೆನ್ನಾಗಿ ಮೂಡಿಬಂದಿವೆ. ಈಗಾಗಲೇ ಸ್ಟೇಡಿಯಂನ ಟಿಕೆಟ್​ಗಳು ಸಂಪೂರ್ಣವಾಗಿ ಮಾರಾಟವಾಗಿದ್ದು, ಪ್ರಧಾನಿ ಆಗಮನಕ್ಕೆ ಕಾದುಕುಳಿತಿದ್ದ ಭಾರತೀಯರಲ್ಲಿ ಮೋದಿ ಅವರ ಮಾತುಗಳಿಂದ ಉತ್ಸಾಹ ಮತ್ತಷ್ಟು ಹೆಚ್ಚಿದೆ.

ಪ್ರಸ್ತುತ ಮೂರು ದಿನಗಳ ಯುಎಸ್​ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನ್ಯೂಯಾರ್ಕ್​ಗೆ ಆಗಮಿಸಿದ್ದಾರೆ. ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಜಿಯಂನಲ್ಲಿ ನಡೆಯುತ್ತಿರುವ "ಮೋದಿ ಮತ್ತು ಯುಎಸ್" ಶೀರ್ಷಿಕೆಯ ಅದ್ಧೂರಿ ಕಾರ್ಯಕ್ರಮವು ಭಾರತೀಯ ಸಮುದಾಯದ ಜನರನ್ನು ಹೆಚ್ಚು ಆಕರ್ಷಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net