ಬೂತ್​ ಮಟ್ಟದ ಕಾರ್ಯಕರ್ತರೊಂದಿಗೆ ಮೋದಿ ಮಾತುಕತೆ! ಚುನಾವಣೆಯ ಮುನ್ನ ಶಕ್ತಿ ತುಂಬಿದ ಪ್ರಧಾನಿ

modi
Published on

ಬೆಳಗಾವಿ: ಇಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಬೆಳಗಾವಿಯ ಧರ್ಮನಾಥ್ ಭವನದಲ್ಲಿ ಪ್ರಧಾನಿ ವರ್ಚುವಲ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಬೂತ್, ಸಮಿತಿ ಮತ್ತು ಪೇಜ್ ಪ್ರಮುಖರು, ನಳಿನ್​ ಕುಮಾರ್​ ಕಟೀಲ್, ಕ್ಯಾಪ್ಟನ್​ ಗಣೇಶ್​ ಕಾರ್ಣಿಕ್, ವೇದವ್ಯಾಸ್​ ಕಾಮತ್​ ಮುಂತಾದವರು ಭಾಗಿಯಾಗಿದ್ದರು.

ಬೂತ್ ಮಟ್ಟದಲ್ಲಿ ಮತದಾರರನ್ನು ಸೆಳೆದು ಮತಗಟ್ಟೆಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಯಕರ್ತರಲ್ಲಿ ವರ್ಚುವಲ್​ ಕಾರ್ಯಕ್ರಮದ ಮೂಲಕನೇರವಾಗಿ ಮಾತಾಡಿ ಮತ್ತಷ್ಟು ಹುರಿದುಂಬಿಸಲು ಮೋದಿ ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕಾರ್ಯಕರ್ತರಿಗೆ ಪ್ರಧಾನಿ ಇಂದು ಭಾಷಣದ ಮೂಲಕ ಟಾನಿಕ್ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, " ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಕರ್ನಾಟಕದ ಬಿಜೆಪಿ ಜಗತ್ತಿಗೆ ಪ್ರಜಾಪ್ರಭುತ್ವದ ಸೂತ್ರಗಳನ್ನು ಹೇಳಿದ ಬಸವಣ್ಣನ ನಾಡಿನವರು. ಹೀಗಾಗಿ ಈ ಚುನಾವಣೆಯಲ್ಲಿ ಡಬಲ್​ ಗೌರವವಿದೆ

ಬೂತ್​ನಲ್ಲಿ ಗೆದ್ದರೆ ನಾವೂ ರಾಜ್ಯದಲ್ಲೂ ಗೆಲ್ಲಬಹುದು. ಕಳೆದ ದಿನಗಳಲ್ಲಿ ನಾನು ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದಾಗ ಕರ್ನಾಟಕದ ಜನರು ಆಶಿರ್ವದಿಸಿದ್ದಾರೆ. ಇದೇ ರೀತಿಯ ಆಶಿರ್ವಾದ ಕರ್ನಾಟಕದ ಬಿಜೆಪಿ ನಾಯಕರ ಮೇಲೂ ಇದೆ" ಎಂದು ಹೇಳಿದರು.

ವಿರೂಪಾಕ್ಷಪ್ಪ ಶಿವಮೊಗ್ಗ "ನನ್ನ ಬೂತ್​ ಗೆಲ್ಲಿಸಿ ಪಾರ್ಟಿಯ ಗೆಲುವನ್ನು ಪಕ್ಕಾ ಮಾಡಬೇಕು ಎಂದಿದ್ದೇನೆ. ಮುಂದಿನ 10 ದಿನಗಳಲ್ಲಿ ನಾವು ಪ್ರತಿ ಬೂತ್​ ಗೆಲ್ಲಿಸಲು ನಾವು ಏನು ಮಾಡಬೇಕು?

ಉ: ಗೆಲ್ಲಬೇಕಾದರೆ ವಿಜಯದಲ್ಲಿ ಗೆಲುವನ್ನು ನಂಬುವ 10 ಪುರುಷರು ಹಾಗೂ 10 ಮಹಿಳೆಯರ ಪ್ರಬಲ ಸಂಘಟನೆ ನಡೆಸಿ. ನಿಮ್ಮ ಡೈರಿಯಲ್ಲಿ ಕರ್ನಾಟಕ ಹಾಗೂ ದೇಶದಲ್ಲಿ ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವ ಮಾಹಿತಿ ಪ್ರತಿಯೊಬ್ಬರ ಡೈರಿಯಲ್ಲಿ ಇರಬೇಕು. ಈ ಮಾಹಿತಿಯನ್ನು ಗ್ರಾಮೀಣ ಜನರಿಗೂ ತಲುಪಿಸಿ. ಬೂತ್​ನ ಜನರ ಮನಸ್ಸನ್ನು ಗೆದ್ದಾಗ ಸುಲಭವಾಗಿ ಪ್ರತಿಯೊಂದು ಬೂತ್​ ಗೆಲ್ಲಬಹುದು. ಎಂದಿದ್ದಾರೆ. ಇದೇ ರೀತಿ ಅನೇಕ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಪ್ರೋತ್ಸಾಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net