

ಗ್ಲಾಸ್ಗೌ: ಹವಾಮಾನ ಬದಲಾವಣೆ ಹೊಂದಿಕೆ ನೀತಿ (ಕ್ಲೈಮೇಟ್ ಚೇಂಜ್ ಅಡಾಪ್ಟೇಷನ್ ಪಾಲಿಸಿ)ಗಳನ್ನು ಶಾಲಾಪಠ್ಯದಲ್ಲೇ ಅಳವಡಿಸಬೇಕು. ಇದರಿಂದ ಆ ಕುರಿತ ಅರಿವು ಮುಂದಿನ ಪೀಳಿಗೆಗೂ ರವಾನೆಯಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟರು.
ಬ್ರಿಟನ್ನ ಗ್ರಾಸ್ಗೌನಲ್ಲಿ ನಡೆಯುತ್ತಿರುವ ಸಿಒಪಿ26 ಕ್ಲೈಮೇಟ್ ಸಮ್ಮಿಟ್ನಲ್ಲಿ ಅವರು ಮಾತನಾಡುತ್ತ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದುವರಿಯುತ್ತಿರುವ ಬಹಳಷ್ಟು ರಾಷ್ಟ್ರಗಳಿಗೆ ಹವಾಮಾನ ದೊಡ್ಡ ಸವಾಲು ಎಂದು ಮೋದಿ ಹೇಳಿದರು.
ಹಲವು ಸಂಪ್ರದಾಯಸ್ಥ ಸಮುದಾಯಗಳು ಪ್ರಕೃತಿಯೊಂದಿಗೆ ಉತ್ತಮ ಒಡನಾಟದಲ್ಲಿವೆ. ಅಂಥ ಸಮುದಾಯಗಳ ಅರಿವು ಮುಂದಿನ ಪೀಳಿಗೆಗೆ ರವಾನೆ ಆಗಬೇಕೆಂದರೆ ಆ ಕುರಿತ ಮಾಹಿತಿ ಶಾಲಾಪಠ್ಯದಲ್ಲಿ ಅಳವಡಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು.