

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ವೇಳೆ ಸೈನಿಕರು ವಾದ್ಯಗಳೊಂದಿಗೆ ವಂದೇ ಮಾತರಂ ಹಾಡುವಾಗ, ನರೇಂದ್ರ ಮೋದಿ ಪಾಲ್ಗೊಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
ವಿಡಿಯೋದಲ್ಲಿ ಯೋಧರ ತಂಡದ ವಂದೇ ಮಾತರಂ ಗಾಯನದ ವೇಳೆ ಮೋದಿ ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು. ಈ ವೇಳೆ ಮೋದಿ ಹಾಡನ್ನು ಗುನುಗುತ್ತಾ, ತಲೆದೂಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಸಶಸ್ತ್ರ ಪಡೆಗಳ ಸೈನಿಕರು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದ್ದಾರೆ. ಪ್ರಧಾನಿ ಮೋದಿ ಸೈನಿಕರಿಗೆ ಶುಭಾಶಯ ತಿಳಿಸುವ ಸಂದರ್ಭದಲ್ಲಿ ರೈಫಲ್ ಹಿಡಿದು ಫೋಸ್ ನೀಡಿದರು.
ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್ನ ಕಾರ್ಗಿಲ್ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರನ್ನು ಉದ್ದೇಶಿಸಿ, ನಿಮ್ಮೊಂದಿಗೆ ಇರದೇ ನಾನು ಉತ್ತಮ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ಮೋದಿ ಅವರು ವಿವಿಧ ಮಿಲಿಟರಿ ಬೇಸ್ನಲ್ಲಿ ಪ್ರತಿವರ್ಷ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಈ ವರ್ಷ ಅವರು ಕಾರ್ಗಿಲ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಯೋಧರಿಗೆ ಸಿಹಿ ಹಂಚಿ, ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.