ನಿಸ್ವಾರ್ಥ ಸೇವೆಯ ಜನನಾಯಕ ಮೋದಿ

bjp celebration
ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ವೀರನಗೌಡ, ಎಸ್.ಎಸ್.ರಾಘವೇಂದ್ರ, ಬೆಣ್ಣೆ ಪ್ರವೀಣ್, ಪ್ರಶಾಂತ್, ರಾಜು, ನಂಜುಂಡಿ, ರವಿಕಾಂತ್, ಪುಟ್ಟ, ರಾಕೇಶ್, ವಸಂತ, ನಾಗರಾಜ್, ಗುರುಪ್ರಸಾದ್ ಇದ್ದರು.
Published on

ಶಿಕಾರಿಪುರ: ಸತತ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಕಿರಣ್ ಟಾಕೀಸ್ ವೃತ್ತ, ಬಸ್ ನಿಲ್ದಾಣ ಸಮೀಪ ಸೇರಿ ವಿವಿಧೆಡೆಗಳಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮೋದಿ, ಬಿಜೆಪಿ ಪರ ೋಷಣೆಗಳನ್ನು ಕೂಗಿದರು.

ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ವೀರನಗೌಡ ಮಾತನಾಡಿ, ಇಡೀ ಜಗತ್ತು ಮೋದಿ ಅವರು ಪ್ರಧಾನಿ ಆಗಿರುವುದನ್ನು ಸಂಭ್ರಮದಿಂದ ಸ್ವಾಗತಿಸಿದೆ. ನರೇಂದ್ರ ಮೋದಿ ಸಂಕಲ್ಪ ಶಕ್ತಿ ಹಾಗೂ ಸಾಮಾಜಿಕ ಕಳಕಳಿಯಿಂದ ದೇಶ ಮುನ್ನಡೆಯಲಿದ್ದು, ದೇಶಕ್ಕಾಗಿ ಜೀವನ ಸಮರ್ಪಿಸಿರುವ ನಿಸ್ವಾರ್ಥ ಸೇವೆಯ ಜನನಾಯಕ ಮೋದಿ ಎಂದು ಬಣ್ಣಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತ ದೇಶದ ಗೌರವ ಹೆಚ್ಚಿಸಿ ವಿಶ್ವನಾಯಕರಾಗಿ ನರೇಂದ್ರ ಮೋದಿ ಗುರುತಿಸಿಕೊಳ್ಳುತ್ತಿದ್ದು, ಭಾರತದ ಸಮಗ್ರ ಅಭಿವೃದ್ಧಿಗೆ ಹತ್ತು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದರು.
ಬಿಜೆಪಿ ನಗರ ಅಧ್ಯಕ್ಷ ಎಸ್.ಎಸ್.ರಾಘವೇಂದ್ರ, ಯುವ ಮೋರ್ಚಾ ಮಾಜಿ ನಗರಾಧ್ಯಕ್ಷ ಬೆಣ್ಣೆ ಪ್ರವೀಣ್, ಪ್ರಶಾಂತ್, ರಾಜು,ನಂಜುಂಡಿ, ರವಿಕಾಂತ್, ಪುಟ್ಟ, ರಾಕೇಶ್, ವಸಂತ, ನಾಗರಾಜ್, ಗುರುಪ್ರಸಾದ್ ಇದ್ದರು.
ಭದ್ರಾವತಿ ವರದಿ: ಭದ್ರಾವತಿ: ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಭಾನುವಾರ ನಗರದ ರಂಗಪ್ಪ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಸೇರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿದರು. ಸಂಭ್ರಮಾಚರಣೆ ನಡೆಸಿ ನಾಗರಿಕರಿಗೆ ಸಿಹಿ ಹಂಚಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಕೆ.ಎನ್.ಶ್ರೀಹರ್ಷ, ತೀರ್ಥಯ್ಯ, ಸಿಮೆಂಟ್ ಮಂಜಣ್ಣ. ಕಾ.ರಾ.ನಾಗರಾಜ್, ರಾಜಶೇಖರ್, ಟಿ.ಎಸ್.ಕೃಷ್ಣಮೂರ್ತಿ, ಚಂದ್ರಪ್ಪ, ಕವಿತಾ, ಕೃಷ್ಣೋಜಿರಾವ್, ಸುಬ್ರಹ್ಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net