

Vote Theft: ಕೇಂದ್ರ ಸರ್ಕಾರವು ಮತ ಕಳ್ಳತನ ಮಾಡಿದೆ ಆದರಿಂದ ನಿಮ್ಮ ಅಧಿಕಾರದ ಸ್ಥಾನದಿಂದ ಅವರನ್ನು ಕಿತ್ತುಹಾಕಿ ಎನ್ನುವ ಘೋಷಣೆ ದೇಶದಾದ್ಯಂತ ಸಾಬೀತಾಗಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ (ಸೆಪ್ಟೆಂಬರ್,10) ಹೇಳಿದ್ದಾರೆ.
ಈ ಬಗ್ಗೆ ಉತ್ತರ ಪ್ರದೇಶದ ರಾಯ್‌ಬರೇಲಿ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನಮ್ಮ ಪ್ರಮುಖ ಘೋಷಣೆಗಳಾದ ಮತ ಕಳ್ಳರು, ಅಧಿಕಾರ ಕಳ್ಳತನದ ಘೋಷಣೆಗಳು ದೇಶಾದ್ಯಂತ ಸಾಬೀತಾಗುತ್ತಿದೆ. ನಾವು ಇದನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿ, ಮತ್ತೆ ಮತ್ತೆ ಸಾಬೀತುಪಡಿಸುತ್ತೇವೆ ಎಂದು ಕೇಂದ್ರದ ವಿರುದ್ಧ ರಾಹುಲ್ ಕಿಡಿಕಾರಿದ್ದಾರೆ.
ರಾಹುಲ್ ತಮ್ಮ ಭೇಟಿಯ ಸಮಯದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಕೈ ಪಕ್ಷದ ನಾಯಕರು ತಿಳಿಸಿದ್ದಾರೆ.
ರಾಯ್‌ಬರೇಲಿಗೆ ರಾಹುಲ್ ಗಾಂಧಿ ಭೇಟಿಯು ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಇಂದು ಜನರಲ್ಲಿ ಉತ್ಸಾಹ ಮತ್ತು ಸಂತೋಷದ ಅಲೆ ಇದೆ. ನಮ್ಮ ನಾಯಕರು ದೇಶದಲ್ಲಿ ನಡೆದ ಮತಗಳ ಕಳ್ಳತನವನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದ್ದಾರೆ. ಇಡೀ ರಾಷ್ಟ್ರವು ಅವರ ಬಗ್ಗೆ ಹೆಮ್ಮೆಪಡುತ್ತಿದೆ ಎಂದು ರಾಯ್ ತಿಳಿಸಿದರು.
ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ಹರ್ಚಂದ್ಪುರದಲ್ಲಿ ಪಕ್ಷದ ಮಾಜಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಂಕಜ್ ತಿವಾರಿ ಹೇಳಿದ್ದಾರೆ. ನಂತರ, ರಾಹುಲ್ ನಗರದ ಹೋಟೆಲ್‌ನಲ್ಲಿ ಪ್ರಜಾಪತಿ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ಗೋರಾ ಬಜಾರ್ ಕ್ರಾಸಿಂಗ್‌ನಲ್ಲಿ ಅಶೋಕ ಸ್ತಂಭವನ್ನು ಉದ್ಘಾಟಿಸಲಿದ್ದಾರೆ.
ರಾಹುಲ್ ಗಾಂಧಿ ಆಗಮನಕ್ಕೆ ರಾಯ್‌ಬರೇಲಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಚಿತ್ರಗಳಿರುವ ಪೋಸ್ಟರ್‌ಗಳನ್ನು ರಾಯ್‌ಬರೇಲಿಯಲ್ಲಿ ಹಾಕಲಾಗಿದೆ. ಭಾರತದ ಕೊನೆಯ ಭರವಸೆ, ಕಲಿಯುಗದ ಬ್ರಹ್ಮ, ವಿಷ್ಣು ಮಹೇಶ್ವರ್ ಎಂದು ಪೋಸ್ಟರ್ನಲ್ಲಿ ಹಾಕಲಾಗಿದೆ. (ಏಜೆನ್ಸೀಸ್)