

ಬೆಂಗಳೂರು: ‘ಮೋದಿ@20’ ಗಮನಾರ್ಹ ಕೃತಿಯಾಗಿದ್ದು, ದೇಶದ ಬೇರೆ ಬೇರೆ ಕ್ಷೇತ್ರಗಳ ಗಣ್ಯರು ಕಂಡಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ, ಧ್ಯೇಯ, ಮನೋಸ್ಥೈರ್ಯ, ಕಾರ್ಯಶೈಲಿಗಳು ಹೇಗಿವೆ? ಎಂಬ ಮಾಹಿತಿ ಕೃತಿಯಲ್ಲಿದೆ.
ಜಾಗತಿಕ ನಾಯಕರಾಗಿ ಕಂಗೊಳಿಸುತ್ತಿರುವ ಮೋದಿ ಅವರಲ್ಲಿನ ಒಬ್ಬ ವೇದಾಂತಿಯೂ, ಸಾಹಸಿಯೂ, ಅರ್ಥಶಾಸ್ತ್ರಜ್ಞನೂ ಬದುಕಿನ ಮೌಲ್ಯ ಶೋಧಕನೂ ಇದ್ದಾನೆಯೇ? ಈ ದೇಶವನ್ನು ಎತ್ತರೆತ್ತರಕ್ಕೆ ಏರಿಸುತ್ತಲೇ ಲೋಕದ ಎಲ್ಲರೂ ಸುಖವಾಗಿ ಬಾಳಬೇಕೆಂಬ ಹಂಬಲವೂ ಇದೆಯೇ? ಚಿಕ್ಕಚಿಕ್ಕ ಕೆಲಸಗಳಿಂದಲೇ ಅದೆಷ್ಟು ಉನ್ನತ ಸ್ಥಾನಕ್ಕೂ ಏರಿ, ವ್ಯಾಪಕ ಜನಮನ್ನಣೆಗೂ ಪಾತ್ರರಾಗಬಹುದೆಂಬ ಅತಿ ವಿಸ್ಮಯಕಾರಿ ಅಂಶಗಳನ್ನು ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ.
ಪಿ.ವಿ.ಸಿಂಧು, ಜೈಶಂಕರ್, ನಂದನ್ ನಿಲೇಕಣಿ, ಸುಧಾಮೂರ್ತಿ, ಡಾ.ದೇವಿ ಶೆಟ್ಟಿ, ಸದ್ಗುರು, ಅಜಿತ್ ದೋವಲ್, ಅನುಪಮ್ ಖೇರ್.. ಇನ್ನೂ ದೊಡ್ಡ ದೊಡ್ಡ ಸಾಧಕರು ಕೃತಿಗೆ ಲೇಖನಗಳನ್ನು ಬರೆದಿದ್ದು, ಕನ್ನಡದ ಶ್ರೇಷ್ಠ ಅನುವಾದಕ ಜಯಪ್ರಕಾಶ ನಾರಾಯಣ ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಾಹಿತ್ಯ ಪ್ರಕಾಶನದವರು ಕೃತಿ ಹೊರತಂದಿದ್ದಾರೆ. ಪ್ರಕಟಣಾ ಪೂರ್ವ ಬೆಲೆ 575 ರೂ. ಮಾತ್ರ! ಮೇ 10ರವರೆಗೆ ಈ ರಿಯಾಯಿತಿ ಸಿಗಲಿದೆ.
ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ‘ಮೋದಿ@20’ ಕನಸೆಲ್ಲ ನನಸು ಕೃತಿಯ ಮೊದಲ ಪ್ರತಿಯನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಹಸ್ತಾಂತರಿಸಿದರು.