ಪರಪ್ಪನ ಅಗ್ರಹಾರದಲ್ಲಿ ಇನ್ನೂ ನಿಂತಿಲ್ಲ ಕೈದಿಗಳ ಕಳ್ಳಾಟ! ಶೌಚಾಲಯದಲ್ಲಿದ್ದ ಫೋನ್​ಗಳು…

Parappana Agrahara
Published on

ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಉಗ್ರ ನಜೀರ್ ಹಾಗೂ ಶಂಕಿತ ಉಗ್ರರ ಕಳ್ಳಾಟ ಬಯಲಾಗಿತ್ತು. ಆದರೂ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ನಿಂತಿಲ್ಲ.

ಇದೀಗ ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪೋನ್​ಗಳ ಪತ್ತೆಯಾಗಿದ್ದು, ಜೈಲಾಧಿಕಾರಿಗಳ ತಪಾಸಣೆ ವೇಳೆ ಕೈದಿಗಳ ಕಳ್ಳಾಟ ಬಯಲಾಗಿದೆ.

ಕಳೆದ 21ನೇ ತಾರೀಕಿನಂದು ರಾತ್ರಿ ಅಧಿಕಾರಿಗಳು ಧಿಡೀರ್ ತಪಾಸಣೆ ನಡೆಸಿದ್ದರು. ಜೈಲಿನ ಟವರ್ ಒಂದರ ಆರನೇ ಬ್ಯಾರಕ್ ತಪಾಸಣೆ ವೇಳೆ ಮೊಬೈಲ್ ಪೋನ್​ಗಳು ಸಿಕ್ಕಿ ಬಿದ್ದಿವೆ. ಈ ಖದೀಮ ಕೈದಿಗಳು ಶೌಚಾಲಯದಲ್ಲಿ ಮೊಬೈಲ್ ಪೋನ್ ಬಚ್ಚಿಟ್ಟಿದ್ದು ಮೂರು ಮೊಬೈಲ್ ಪೋನ್​ಗಳನ್ನು ಜೈಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಎಷ್ಟೇ ಕ್ರಮ ಕೈಗೊಂಡ್ರು ಜೈಲಿನಲ್ಲಿ ಅಕ್ರಮ ಚಟುವಟಿಕೆ ನಿಲ್ಲದೇ ಇದ್ದು, ಪದೇ ಪದೇ ಮೊಬೈಲ್ ಪೋನ್, ಮಾದಕ ವಸ್ತುಗಳು ಪತ್ತೆ ಆಗುತ್ತಲೇ ಇವೆ. ಪರಪ್ಪನ ಅಗ್ರಹಾರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಬೈಲ್ ಪೋನ್ ಗಳನ್ನ ಯಾರು ಬಳಕೆ ಮಾಡುತ್ತಿದ್ರು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net