ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ನಾಸಿರ್​ಗೆ ರಾಜಾತಿಥ್ಯ? ಆಂತರಿಕ ತನಿಖೆಗೆ ಆದೇಶ

Parappana Agrahara (1)
Published on

ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ಪ್ರಕರಣವೀಗ ಪರಪ್ಪನ ಅಗ್ರಹಾರ ಜೈಲಿಗೂ ಶಿಫ್ಟ್​ ಆಗಿದೆ. ಪ್ರಕರಣದ ಎ-1 ಆರೋಪಿಯಾಗಿರುವ ಉಗ್ರ ನಾಸಿರ್​ಗೆ ಜೈಲಿನಲ್ಲಿ ರಾಜಾಥಿತ್ಯ ಸಿಗುತ್ತಿತ್ತು ಎನ್ನಲಾಗಿದೆ. ಹಣದಾಸೆಗಾಗಿ ಅಧಿಕಾರಿಗಳು ನಾಸಿರ್‌ಗೆ ಸಪೋರ್ಟ್ ಮಾಡುತ್ತಿದ್ದರಾ? ಎಂಬ ಅನುಮಾನ ಹುಟ್ಟಿಕೊಂಡಿದೆ.

ಉಗ್ರ ನಾಸಿರ್​ ಜೈಲಿನಲ್ಲಿದ್ದುಕೊಂಡೇ ಜಿಹಾದಿ ಬಗ್ಗೆ ಬೇರೆ ಕೈದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ. ಅತೀ ಭದ್ರತಾ ವಿಭಾಗದಲ್ಲಿದ್ರೂ ನಾಸಿರ್​ಗೆ ವಿಐಪಿ ಆತಿಥ್ಯ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಸಿರ್​ಗೆ ರಾಜ್ಯಾತಿಥ್ಯ ಆರೋಪ ಬೆನ್ನಲ್ಲೇ ಆಂತರಿಕ ತನಿಖೆಗೆ ಆದೇಶ ಮಾಡಲಾಗಿದೆ. ಕಾರಾಗೃಹಗಳ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ತನಿಖೆಗೆ ಆದೇಶ ಮಾಡಿದ್ದಾರೆ. ಅತೀ ಭದ್ರತಾ ಸೆಲ್‌ನಲ್ಲಿದ್ದ ನಾಸಿರ್, ಬಂಧಿತ ಐವರು ಶಂಕಿತರು ಹಾಗೂ ನಾಪತ್ತೆಯಾಗಿರುವ ಜುನೈದ್​ನನ್ನು ಸಂಪರ್ಕ ಮಾಡಿದ್ದ. ನಾಸಿರ್ ಜೊತೆ ಜೈಲಾಧಿಕಾರಿಗಳು ಸಹ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆಂತರಿಕ ತನಿಖೆ ನಡೆಸುವಂತೆ ಎಡಿಜಿಪಿ ಆದೇಶಿಸಿದ್ದಾರೆ.

ನಾಸಿರ್​ನ ಕರಾಳ ಹಿನ್ನೆಲೆ

ಶಂಕಿತ ಉಗ್ರರ ಕಮಾಂಡರ್ ನಾಸಿರ್‌ ಕರಾಳ ಹಿನ್ನೆಲೆ ಹೊಂದಿದ್ದಾನೆ. 2008ರ ಬೆಂಗಳೂರು ಸರಣಿ ಸ್ಫೋಟದಲ್ಲಿ ನಾಸಿರ್ ಲಾಕ್ ಆಗಿದ್ದ. ಇದೀಗ ಮುಂಬೈ ಮಾದರಿ ಬೆಂಗಳೂರು ಸ್ಫೋಟಕ್ಕೆ ನಾಸಿರ್ ಸ್ಕೆಚ್ ಹಾಕಿದ್ದರು. ಈತ ನಿಷೇಧಿತ LeT ಸಂಘಟನೆಯವನಲ್ಲ. ನಿಷೇಧಿತ ಸಿಮಿ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಸಿಮಿ ಬ್ಯಾನ್ ಆದ ಕೂಡಲೇ ಇಂಡಿಯನ್ ಮುಜಾಹಿದ್ದೀನ್‌ ಸಂಘಟನೆಗೆ ಸೇರಿದ್ದ. ಕೇರಳದ ಕೊಲ್ಲಂನವನಾದ ನಾಸಿರ್, ಸರಣಿ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ. ಉಗ್ರ ಮದನಿ ಜೊತೆ ಸೇರಿ 2008ರಲ್ಲಿ ಬೆಂಗಳೂರು ಸ್ಫೋಟ ನಡೆಸಿದ್ದ. ಬೆಂಗಳೂರಿನ ಎಂಟು ಕಡೆ ಬಾಂಬ್‌ಗಳನ್ನು ಇಟ್ಟು ಸ್ಫೋಟಿಸಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net