ಲಾಕ್​ಡೌನ್ ನಿಯಮ ಪಾಲನೆಗೆ ಪ್ರಯತ್ನಿಸಿದ ಪೊಲೀಸರ ಮೇಲೆ ಗುಂಪು ದಾಳಿ: ಮೂವರು ಪೊಲೀಸರಿಗೆ ಗಾಯ

Police 25 APR 20
Published on

ಗೊಡ್ಡಾ: ಜಾರ್ಖಂಡ್​ನ ಗೊಡ್ಡಾ ಜಿಲ್ಲೆಯಲ್ಲಿ ಲಾಕ್​ಡೌನ್ ನಿಯಮಗಳ ಪಾಲನೆಯ ಕರ್ತವ್ಯದಲ್ಲಿದ್ದ ಮೂವರು ಪೊಲೀಸರ ಮೇಲೆ ಶುಕ್ರವಾರ ಗುಂಪು ದಾಳಿ ನಡೆದಿದೆ. ಸೋಷಿಯಲ್ ಡಿಸ್ಟೆನ್ಸಿಂಗ್ ಕುರಿತು ಗುಂಪಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾಗ ಮಸೀದಿಯೊಂದರ ಸಮೀಪ ಈ ಘಟನೆ ನಡೆದಿದೆ.

ಜಿಲ್ಲೆಯ ಠಾಕೂರ್​ಗಂಗ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಾವೋ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಧಾರ್ಮಿಕ ಕೇಂದ್ರದಲ್ಲಿ ಅವರು ಗುಂಪು ಸೇರಿದ್ದರು. ಅವರಿಗೆ ಸೋಷಿಯಲ್ ಡಿಸ್ಟೆನ್ಸಿಂಗ್ ಬಗ್ಗೆ ತಿಳಿ ಹೇಳಲು ಪ್ಯಾಟ್ರೋಲಿಂಗ್ ಟೀಮ್​ ನ ಪೊಲೀಸರು ಪ್ರಯತ್ನಿಸಿದಾಗ ಆ ಗುಂಪು ಪೊಲೀಸರ ಮೇಲೆ ಕಲ್ಲು ತೂರಿದೆ. ಪರಿಣಾಮ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಎಸ್​ಪಿ ಶೈಲೇಂದ್ರ ಪ್ರಸಾದ್ ಬರ್ನವಾಲ್​ ತಿಳಿಸಿದ್ದಾರೆ.

ಈ ಸಂಬಂಧ 60 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಗುರುತುವಿವರ ಪತ್ತೆಹಚ್ಚುವ ಕೆಲಸ ನಡೆದಿದೆ. ಅಲ್ಲದೆ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಅವರಿಂದಲೂ ಮಾಹಿತಿ ಪಡೆಯಲಾಗುತ್ತಿದ್ದು ಅಲ್ಲಿ ಸೇರಿದ್ದವರ ವಿರುದ್ಧ ಕೇಸ್ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net