ಆರೋಪ ಮಾಡೋದನ್ನು ಇಂದೇ ನಿಲ್ಲಿಸಬೇಕು, ಇಲ್ಲ ಅಂದ್ರೆ… ವೀಣಾಗೆ ಖಡಕ್ ಎಚ್ಚರಿಕೆ ಕೊಟ್ಟ ಶಾಸಕ

WhatsApp Image 2024-04-07 at 7.59.42 PM
Published on

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್​ ಪತ್ನಿ ವೀಣಾ ಕಾಶಪ್ಪನವರ್​, ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕೈ ನಾಯಕರ ವಿರುದ್ಧ ಭಾರೀ ಅಸಮಾಧಾನ ಹೊರಹಾಕಿದ್ದರು. ವೀಣಾರ ಬೇಸರ ಶಮನಗೊಳಿಸಲು ಸಿಎಂ, ಡಿಸಿಎಂ ಸಭೆಯೂ ನಡೆಯಿತು. ಆದರೆ, ಅದು ಕೂಡ ವಿಫಲವಾಯಿತು. ಸದ್ಯ ವೀಣಾ ಮುನಿಸು ಮುಂದುವರೆದಿದ್ದು, ಅವರು ಮಾಡಿದ ಆರೋಪಗಳಿಗೆ ಮಾತ್ರ ಬೀಳಗಿ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಬಾಗಲಕೋಟೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬೀಳಗಿ ಶಾಸಕ ಜೆ.ಟಿ. ಪಾಟೀಲ, ಆರೋಪ ಮಾಡುವುದನ್ನು ಇಂದೇ ಸ್ಟಾಪ್ ಮಾಡಬೇಕು. ಇಲ್ಲವಾದ್ರೆ ನಾವೀನ್ನು ಸುಮ್ಮನಿರಲ್ಲ. ನಿಮ್ಮ ವಿರುದ್ದ ಕೆಪಿಸಿಸಿ, ಎಐಸಿಸಿಗೆ ದೂರು ಕೊಡಬೇಕಾಗುತ್ತದೆ ಎಂದು ವೀಣಾ ಕಾಶಪ್ಪನವರ್​ಗೆ ಪರೋಕ್ಷವಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟಿಕೆಟ್ ತಪ್ಪಿದ್ದಕ್ಕೆ ಪದೇ ಪದೇ ಜಿಲ್ಲೆಯ ಶಾಸಕರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಆದ್ರೆ‌ ಈ ಆರೋಪವನ್ನು ನಾವು ಹೊರಲು ಸಾಧ್ಯವಿಲ್ಲ. ನಾವೇನೂ ಅಂತಹ ಕೆಲಸ ಮಾಡಿಲ್ಲ. ಹಾಗೇನಾದ್ರೂ ಮಾಡಿದ್ರೆ ನಾವು ಶಾಸಕರ ಸ್ಥಾನಕ್ಕೆ ರಾಜೀನಾಮೆ‌ ಕೊಡಲು ಸಿದ್ಧ. ನಾವು ಆರೋಪಿ ಸ್ಥಾನದಲ್ಲಿ ನಿಲ್ಲೋಕೆ ರೆಡಿಯಿಲ್ಲ. ಪದೇ ಪದೇ ಈ ರೀತಿ ಆರೋಪ ಮಾಡುವುದನ್ನು‌‌ ನಿಲ್ಲಿಸದೇ ಇದ್ರೆ, ಖಂಡಿತ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net