'ಐರನ್‌ಮ್ಯಾನ್' ಪೂರ್ಣಗೊಳಿಸಿದ 'ಐಜಿಪಿ ಸಂದೀಪ್ ಪಾಟೀಲ್'​ಗೆ ಅಭಿನಂದನೆ ಸಲ್ಲಿಸಿದ ಶಾಸಕ 'ಸುರೇಶ್​ ಕುಮಾರ್'​| igp

Untitled design (2)
Published on

ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸಂದೀಪ್ ಪಾಟೀಲ್ ಅವರು, ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಐರನ್‌ಮ್ಯಾನ್ ಟ್ರಯಥ್ಲಾನ್ ಅನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಇವರ ಈ ಸಾಧನೆಗೆ ಮಾಜಿ ಸಚಿವ ಹಾಗೂ ರಾಜಾಜಿನಗರ ಶಾಸಕ ಸುರೇಶ್​ ಕುಮಾರ್​ ಅಭಿನಂದನೆ ಸಲ್ಲಿಸಿದ್ದಾರೆ.

ಕೋಪನ್ ಹ್ಯಾಗನ್​ನಲ್ಲಿ ನಡೆದ ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್ (ಡಬ್ಲ್ಯೂಟಿಸಿ) ನಡೆಸಿದ ಪ್ರತಿಷ್ಠಿತ ಜಾಗತಿಕ ಸವಾಲಿನಲ್ಲಿ ಸ್ಪರ್ಧಿಸಿದ ಕರ್ನಾಟಕ ಕೇಡರ್​ನ ಏಕೈಕ ಐಪಿಎಸ್ ಅಧಿಕಾರಿ ಸಂದೀಪ್​ ಪಾಟೀಲ್​ ಆಗಿದ್ದಾರೆ.

ಶಾಸಕ ಸುರೇಶ್​ ಕುಮಾರ್​ ಹೇಳಿದ್ದೇನು.?

ನಮ್ಮ ರಾಜ್ಯಕ್ಕೆ ಹೆಮ್ಮೆ ತರುವ ಸಾಧನೆ ಮಾಡಿರುವ ಶ್ರೀ ಸಂದೀಪ್ ಪಾಟೀಲರಿಗೆ ನಾನು ಖುದ್ದಾಗಿ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದ್ದೇನೆ. ಸಮುದ್ರದಲ್ಲಿ 3.8 ಕಿ.ಮೀ ಈಜು ಹೊಡೆದ ನಂತರ, ತಕ್ಷಣವೇ 180 ಕಿಲೋಮೀಟರ್ ದೂರ ಸೈಕಲ್ ತುಳಿದು, ನಂತರ ತಕ್ಷಣವೇ 42km ದೂರ ಓಡಿ ಇವೆಲ್ಲವನ್ನೂ ಕೇವಲ 14 ಗಂಟೆ 45 ನಿಮಿಷಗಳಲ್ಲಿ ಪೂರೈಸಿದ್ದಾರೆ. ಇದಕ್ಕಾಗಿ ಕಳೆದ ಜನವರಿ ತಿಂಗಳಿಂದ ಅವರು ಮಾಡಿರುವ ನಿರಂತರತೆ ಅವರು ಕಾಪಾಡಿಕೊಂಡಿರುವ ಶಾರೀರಿಕ ಶಿಸ್ತು ಎಲ್ಲಾ ವಿವರಗಳು ನಿಜಕ್ಕೂ ಶ್ಲಾಘನೀಯ. ಇವರ ಈ ಕಾರ್ಯ ಯುವ ಜನಾಂಗಕ್ಕೆ ಒಂದು ಪ್ರೇರಣೆ ನೀಡುವಂತಹದ್ದು. ಮತ್ತೊಮ್ಮೆ ಪೋಲಿಸ್ ಇಲಾಖೆಗೆ, ರಾಜ್ಯಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿರುವ ಶ್ರೀ ಸಂದೀಪ್ ಪಾಟೀಲ್ ಅವರಿಗೆ ಅಭಿನಂದನೆಗಳು ಎಂದು ಶಾಸಕ ಸುರೇಶ್​ ಕುಮಾರ್​ ಅವರು ಫೇಸ್​ಬುಕ್​ ಪೇಜ್​ನಲ್ಲಿ ಬರೆದಿದ್ದಾರೆ.

ಸಂದೀಪ್ ಪಾಟೀಲ್ ಹೇಳಿದ್ದೇನು.?

(ಏಜೆನ್ಸೀಸ್)

ಸಮುದ್ರದಲ್ಲಿ 3.8 ಕಿ.ಮೀ ಈಜುವುದನ್ನು ಮುಗಿಸಿದೆ, 180 ಕಿ.ಮೀ ಸೈಕಲ್ ತುಳಿದು 14 ಗಂಟೆ 45 ನಿಮಿಷಗಳಲ್ಲಿ 42 ಕಿ.ಮೀ ಓಡಿದೆ ಎಂದು ಪಾಟೀಲ್ ತಿಳಿಸಿದ್ದಾರೆ. ನಾನು ಒಂದೂವರೆ ವರ್ಷಗಳ ಹಿಂದೆ ಟ್ರಯಥ್ಲಾನ್‌ಗಾಗಿ ತರಬೇತಿಯನ್ನು ಪ್ರಾರಂಭಿಸಿದೆ. ಆದರೆ ಈ ವರ್ಷದ ಜನವರಿಯಲ್ಲಿ ಟ್ರಯಥ್ಲಾನ್‌ಗೆ ನೋಂದಾಯಿಸಿದ ಬಳಿಕ ಆರು ತಿಂಗಳ ಹಿಂದೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. ಐರನ್‌ಮ್ಯಾನ್‌ನಲ್ಲಿ ಅರ್ಹತೆ ಪಡೆಯಲು ಮತ್ತು ಸ್ಪರ್ಧಿಸಲು ಅದನ್ನು ಸಾಧಿಸುವ ದೃಢಸಂಕಲ್ಪದ ಜೊತೆಗೆ ಹೆಚ್ಚಿನ ಮಟ್ಟದ ಶಿಸ್ತು ಮತ್ತು ತರಬೇತಿಯ ಅಗತ್ಯವಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧಿಸುವುದು ಒಂದು ಸವಾಲಾಗಿತ್ತು, ವಿಶೇಷವಾಗಿ ನನ್ನ ಹಿಂದಿನ ಈಜು ಅನುಭವವು 300 ಮೀಟರ್ ಆಗಿತ್ತು. ಅಲ್ಲಿಂದ 3.8 ಕಿಮೀ ಈಜುವುದನ್ನು ಕಲಿಯುವುದು, ಅದು ಕೂಡ ಸಮುದ್ರದಲ್ಲಿ ಒಂದು ದೊಡ್ಡ ಸವಾಲಾಗಿತ್ತು. ನಾನು ಹೆಚ್ಚು ಉತ್ತಮವಾಗಿ ಮತ್ತು ದಾಖಲೆ ಸಮಯದಲ್ಲಿ ಈಜಲು ನನ್ನನ್ನು ಪ್ರೇರೇಪಿಸಿಕೊಂಡೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net