ನಿಮ್ಮಲ್ಲಿನ ಕೋಪ ದಿನೇ ದಿನೇ ಹೆಚ್ಚಾಗ್ತಿದ್ಯಾ.? ಇದನ್ನು ಕಡಿಮೆ ಮಾಡಲು ಚಾಣಕ್ಯನ ಈ ಸಲಹೆ ಅನುಸರಿಸಿ ಸಾಕು| chanakya-niti

Untitled design (1)
Published on

Chanakya Niti: ಕೋಪವನ್ನು ನಿಯಂತ್ರಿಸುವ ಬಗ್ಗೆ ಚಾಣಕ್ಯ ನೀತಿಯಲ್ಲಿ ವಿಶೇಷ ಸಲಹೆಗಳನ್ನು ನೀಡಲಾಗಿದೆ. ಏಕೆಂದರೆ ಕೋಪವು ಮನುಷ್ಯನ ವಿವೇಕವನ್ನು ಕಸಿದುಕೊಂಡು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದುಎಂದು ಚಾಣಕ್ಯರು ಗುರುತಿಸಿದ್ದಾರೆ. ಹಾಗಿದ್ರೆ ಕೋಪವನ್ನು ಕಡಿಮೆ ಮಾಡಲು ಚಾಣಕ್ಯ ನೀತಿಯ ಕೆಲವು ಸಲಹೆಗಳನ್ನು ತಿಳಿಯೋಣ.

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಕೋಪವನ್ನು ತಡೆಯುವುದೇಗೆ?

ಸರಿಯಾದ ಚಿಂತನೆ:

ಚಾಣಕ್ಯನ ಪ್ರಕಾರ, ಕೋಪವು ಮನಸ್ಸಿನ ಒಳಗಿಂದ ಬರುತ್ತದೆ. ಹಾಗಾಗಿ ಕೋಪ ಬಂದಾಗ ಒಂದು ಕ್ಷಣ ಸುಮ್ಮನಾಗಿಬಿಡಿ, ಆ ಘಟನೆಯ ಬಗ್ಗೆ ವಿವೇಕದಿಂದ ಯೋಚಿಸಿ. ಕೋಪದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗದು, ಬದಲಿಗೆ ವಿವೇಕದಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಹೇಳಲಾಗಿದೆ.

ಕ್ಷಮೆಯ ಗುಣ:

ಚಾಣಕ್ಯರು ಕ್ಷಮೆಯನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಿದ್ದಾರೆ. ಕೋಪವನ್ನು ತೋರಿಸುವ ಬದಲು, ಕ್ಷಮೆಯಿಂದ ವರ್ತಿಸುವುದು ದೊಡ್ಡ ಮನಸ್ಸಿನ ಲಕ್ಷಣ. ಕ್ಷಮೆಯಿಂದ ಕೋಪವನ್ನು ಗೆಲ್ಲಬಹುದು, ಆದರೆ ಕೋಪದಿಂದ ಯಾವುದೇ ಗೆಲುವು ಸಾಧ್ಯವಿಲ್ಲ.

ಸ್ವಯಂ ನಿಯಂತ್ರಣ:

ಕೋಪವನ್ನು ಕಡಿಮೆ ಮಾಡಲು ಸ್ವಯಂ ನಿಯಂತ್ರಣ ಅತ್ಯಗತ್ಯ. ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರುವವನೇ ನಿಜವಾದ ಶಕ್ತಿಶಾಲಿ. ಧ್ಯಾನ, ಶ್ವಾಸಕೋಶದ ವ್ಯಾಯಾಮ ಅಥವಾ ಶಾಂತವಾಗಿರುವ ಸ್ಥಳದಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ಕೋಪವನ್ನು ಶಮನಗೊಳಿಸಬಹುದು ಎಂದು ಚಾಣಕ್ಯರು ಹೇಳುತ್ತಾರೆ.

ಕಾರಣವನ್ನು ತಿಳಿಯುವುದು:

ಚಾಣಕ್ಯನ ಪ್ರಕಾರ, ಕೋಪವು ಭಯ, ಆಸೆ, ಅಥವಾ ತಪ್ಪುಗ್ರಹಿಕೆಯಿಂದ ಬರಬಹುದು. ಇದರ ಕಾರಣವನ್ನು ಗುರುತಿಸಿದರೆ, ಅದನ್ನು ನಿಯಂತ್ರಿಸಲು ಸುಲಭವಾಗುತ್ತದೆ.

ಸರಿಯಾದ ನಡತೆ:

ಕೋಪದಲ್ಲಿ ತೆಗೆದುಕೊಂಡ ನಿರ್ಧಾರವು ಶತ್ರುವಿನ ಗೆಲುವಿಗೆ ಕಾರಣವಾಗಬಹುದು ಎಂದು ಚಾಣಕ್ಯ ಎಚ್ಚರಿಸುತ್ತಾರೆ. ಕೋಪ ಬಂದಾಗ ಮಾತನಾಡುವ ಮೊದಲು ಒಮ್ಮೆ ಯೋಚಿಸಿ, ಏಕೆಂದರೆ ಕೋಪದ ಮಾತುಗಳು ಸಂಬಂಧಗಳನ್ನು ಹಾಳುಮಾಡಬಹುದು.

(ಏಜೆನ್ಸೀಸ್)

ಹಾಗಾಗಿ ಕೋಪ ಬಂದಾಗ 10 ಸೆಕೆಂಡ್‌ಗಳವರೆಗೆ ಆಳವಾಗಿ ಉಸಿರಾಡಿ. ಸಮಸ್ಯೆಯನ್ನು ಶಾಂತವಾಗಿ ಚರ್ಚಿಸಲು ಪ್ರಯತ್ನಿಸಿ. ಧ್ಯಾನ ಅಥವಾ ಯೋಗವನ್ನು ಅಭ್ಯಾಸ ಮಾಡಿ, ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಚಾಣಕ್ಯನ ಈ ತತ್ವಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ಕೋಪವನ್ನು ನಿಯಂತ್ರಿಸಲು ಮತ್ತು ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ..

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net