ಕರೀನ ಕಪೂರ್​ ಖಿಚಡಿಯಲ್ಲಿ ಆದಷ್ಟು ಆರಾಮ ಪಡೆಯುತ್ತಾರಂತೆ! ಏಕೆ? | Kareena Kapoor

Kareena Kapoor vvani
Published on

Kareena Kapoor : ಕರೀನಾ ಕಪೂರ್​ ಬಹಳ ಹಿಂದಿನಿಂದಲೂ ತಮ್ಮ ಫಿಟ್ನೆಸ್​ ಹಾಗೂ ಗ್ಲಾಮರ್​ನಲ್ಲಿ ಹೆಚ್ಚು ಆಸಕ್ತಿ ತೋರಿಸುವಂತ ನಟಿ. ಅವರ ​ಝೀರೋ ಸೈಜ್ ದೇಹವು ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಇನ್ನು ಅವರ ಸಾಮಾಜಿಕ ಮಾಧ್ಯಮವು ಆಗ್ಗಾಗೆ ಅವರ ಯೋಗ ಮ್ಯಾಟ್​ಗಳು, ಆರೋಗ್ಯಕರ ಪಾನೀಯ ಹಾಗೂ ಅವರ ಅಭಿರುಚಿಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

ಸ್ವಾಭಾವಿಕವಾಗಿ, ಅಭಿಮಾನಿಗಳಲ್ಲಿ ಕರೀನಾ ಅವರು ದೇಹವನ್ನು ಇಷ್ಟು ಫಿಟ್ನೆಸ್​ ಆಗಿ ಇಟ್ಟುಕೊಳ್ಳಲು ಏನು ತಿನ್ನುತ್ತಾರೆ? ಎಂಬುದು ಕುತೂಹಲ ಮೂಡಿಸಿದೆ. ಆದರೆ, ಅದಕ್ಕೆ ನಟಿ ಖಿಚಡಿ ಎಂದು ಜನರನ್ನು ಆಕರ್ಷಕಗೊಳಿಸಿದ್ದಾರೆ.

ನಟಿ ಕೆಲವು ದಿನಗಳ ಹಿಂದೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ಅವರು ಇಷ್ಟಪಟ್ಟು ಸೇವಿಸುವ ಆಹಾರದ ಬಗ್ಗೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ಸಾಧಾರಣ ಒಂದು ಪಾತ್ರೆಯ ಊಟವು ತನ್ನ ಅಂತಿಮ ಆರಾಮದಾಯಕ ಆಹಾರ ಎಂದು ಬಹಿರಂಗಪಡಸಿದ್ದಾರೆ. ಇನ್ನು ನಾನು ಅನಾರೋಗ್ಯದಿಂದ ಬಳಲುತ್ತಿರಲಿ, ಅಥವಾ ಉಷ್ಣತೆ ಹೊಂದಿರಲಿ ಅನ್ನ, ಬೇಳೆ, ತರಕಾರಿಗಳು ಮಿಶ್ರಣ ಇದು ಆರಾಮದಾಯಕವಾದ ಆಹಾರವಾಗಿದೆ.

ಇನ್ನು ಆಹಾರದ ಆಯ್ಕೆಗಳು ಮತ್ತು ಅಭ್ಯಾಸಗಳು ಕಾಲಾನಂತರದಲ್ಲಿ ವಿಕಸನಗೊಂಡಿವೆ ಆದರೆ ಖಿಚಡಿ ಸೇವಿಸುವುದು ಪೀಳಿಗೆಯಿಂದ ಪೀಳಿಗೆಗೆ ಬಂದ ಪ್ರೀತಿ. ಪ್ರತಿ ರಾತ್ರಿ ಊಟದ ಟೇಬಲ್​ ಮೇಲೆ ಖಿಚಡಿ ಇಲ್ಲದಿದ್ದರೆ ರಾತ್ರಿ ನಾನು ಮಲಗುವುದೇ ಇಲ್ಲ. ಅಷ್ಟು ಪ್ರೀತಿ ಖಿಚಡಿ ಮೇಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net