ಸಚಿವ-ಸಂಸದ-ಜಿಲ್ಲಾಧಿಕಾರಿಯನ್ನೇ 'ಬೋ...ಮಗ' ಎಂದ ಕಾಂಗ್ರೆಸ್​ ಶಾಸಕ! ಆಡಿಯೋ ವೈರಲ್​

C Puttarangashetty
Published on

ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ನಾಲಿಗೆ ಹರಿಬಿಟ್ಟಿದ್ದು, ಮಾತಿನುದ್ದಕ್ಕೂ ಬೋ... ಮಗ, ಬಡ್ಡಿಮಗ ಎಂದು ಅಧಿಕಾರಿಗಳು ಮತ್ತು ಸಚಿವರು, ಸಂಸದರು, ಮಾಜಿ ಶಾಸಕರನ್ನು ಏಕವಚನದಲ್ಲೇ ನಿಂದಿಸಿರುವ ಆಡಿಯೋ ವೈರಲ್​ ಆಗಿದೆ.

ಜಿಲ್ಲೆಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲೂ ರಾಜಕೀಯ ಗುದ್ದಾಟ ಶುರುವಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಬೋ... ಮಗ ಎಂದು ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

ಮೂರನೇ ಹಂತದ ಕೆರೆಗಳನ್ನ ತುಂಬಿಸದೆ ನಾಲ್ಕನೇ ಹಂತದ ಕೆರೆಗಳಿಗೆ ನೀರು ಬಿಟ್ಟ ವಿಚಾರವಾಗಿ ರೈತರೊಬ್ಬರು ಶಾಸಕ ಪುಟ್ಟರಂಗಶೆಟ್ಟಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ರೈತರನ್ನು ಎತ್ತಿಕಟ್ಟುವ ಪ್ರಯತ್ನವನ್ನೂ ಶಾಸಕ ಮಾಡಿದ್ದಾರೆ.

ಅಷ್ಟೇ ಅಲ್ಲ, ಸಂಭಾಷಣೆಯಲ್ಲಿ ಮಾತಿನುದ್ದಕ್ಕೂ ಬೋ...ಮಗ, ಬಡ್ಡಿಮಗ ಎಂದು ಅಧಿಕಾರಿಗಳನ್ನ ಶಾಸಕರು ನಿಂದಿಸಿದ್ದಾರೆ. ಸಂಸದ ಶ್ರೀನಿವಾಸ್ ಪ್ರಸಾದ್, ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಶಾಸಕ ನಿರಂಜನ್ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳನ್ನ ಏಕವಚನದಲ್ಲೇ ಸಂಬೋಧಿಸಿರುವ ಪುಟ್ಟರಂಗಶೆಟ್ಟಿ, ಬೋ ಮಗ... ಬಡ್ಡಿ ಮಗ... ಎಂದು ಕಾವೇರಿ ನಿಗಮದ ಇಂಜಿನಿಯರ್​ಗಳನ್ನೂ ಬೈದಿದ್ದಾರೆ. ಈ ಆಡಿಯೋ ಸಖತ್​ ವೈರಲ್​ ಆಗಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net