ದೇವನಕೆರೆ ಅಭಿವೃದ್ಧಿಗೆ ಆದ್ಯತೆ

30 BIRUR 002
ಬೀರೂರು-ಬಿ.ಜೋಡಿಹಳ್ಳಿ ಸಂಪರ್ಕ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ರತ್ನಮ್ಮ, ಶಿಲ್ಪಾ ರಾಮಪ್ಪ, ಹರೀಶ್, ಶಶಿ, ರಾಘವೇಂದ್ರ, ಹೊಗರೆಹಳ್ಳಿ ಶಶಿಧರ್ ಇದ್ದರು.
Published on

ಬೀರೂರು: ಪಟ್ಟಣದ ಮೂಲಕ ಬಿ.ಕೋಡಿಹಳ್ಳಿ ಬಳ್ಳಿಗನೂರು ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, 35 ಲಕ್ಷ ರೂ. ವೆಚ್ಚದಲ್ಲಿ ಭೂ ಸಾರಿಗೆ ಇಲಾಖೆಯಿಂದ ಈ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದೆ. ಪಟ್ಟಣದ ಮೂಲಕ ಕೋಡಿಹಳ್ಳಿ, ಬಳ್ಳಿಗನೂರು ಸೇರಿದಂತೆ ಈ ಭಾಗದ ಗ್ರಾಮಗಳಿಗೆ ತೆರಳಲು ಅನುಕೂಲವಾಗಲಿದೆ. ನೂತನ ರಸ್ತೆ ಅಕ್ಕಪಕ್ಕದ ಜಮೀನಿನ ಮಾಲೀಕರು ಜಾಗ ಬಿಟ್ಟುಕೊಟ್ಟರೆ ರಸ್ತೆಯ ಅಗಲ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ರೈಲ್ವೆ ಸೇತುವೆಯಿಂದ ಈ ಭಾಗದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಬಗ್ಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದ್ದು ಪರಿಹಾರ ಸಿಗುವ ವಿಶ್ವಾಸವಿದೆ.
ಭದ್ರಾ ಉಪಕಣಿವೆ ಯೋಜನೆಯಡಿ 36 ಕೆರೆಗಳಿಗೆ ನೀರು ತುಂಬಿಸುವ ಕಾರ್ಯದ ಮೂಲಕ ಕುಡಿಯುವ ನೀರಿನ ಹಾಗೂ ರೈತರ ತೋಟಗಳ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ದೊರಕಲಿದೆ ಎಂದರು. ಬಳ್ಳಿಗನೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಶಿಲ್ಪಾ ರಾಮಪ್ಪ, ಹರೀಶ್, ಶಶಿ, ರಾಘವೇಂದ್ರ, ಬಗರ್‌ಹುಕುಂ ಸಮಿತಿ ಸದಸ್ಯ ಹೊಗರೆಹಳ್ಳಿ ಶಶಿಧರ್, ಚಂದ್ರಪ್ಪ, ಸುರೇಶ್, ರವಿ, ತಾಪಂ ಮಾಜಿ ಅಧ್ಯಕ್ಷ ದಾಸನಗುತ್ತಿ ಚಂದ್ರಪ್ಪ, ತಿಮ್ಮರಾಯಪ್ಪ, ಬಿ.ಜಿ.ಬಸಪ್ಪ, ಕಂಸಾಗರ ಸೋಮಶೇಖರ್, ಭೂಸಾರಿಗೆ ಇಲಾಖೆ ಸಹಾಯಕ ಅಭಿಯಂತರೆ ವಿ.ಎನ್.ಅಶ್ವಿನಿ, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net