ನಾಪತ್ತೆಯಾಗಿರುವ ಸೈನಿಕನ ರಕ್ತ ಸಿಕ್ತ ಬಟ್ಟೆಗಳು ಪತ್ತೆ: ಅತನನ್ನು ಅಪಹರಿಸಿದ್ದು ಯಾರು?

Soldier
Published on

ನವದೆಹಲಿ: ನಾಪತ್ತೆಯಾಗಿರುವ ಸೈನಿಕನನ್ನು ಉಗ್ರರು ಅಪಹರಿಸಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೈನಿಕನ ಬಟ್ಟೆಗಳು ಇತ್ತೀಚೆಗೆ ಪತ್ತೆಯಾಗಿವೆ. ಆತನ ವಾಹನ ಸುಟ್ಟ ಸ್ಥಿತಿಯಲ್ಲಿ ಕುಲ್ಗಾಂ ಬಳಿ ಪತ್ತೆಯಾಗಿದೆ.

ಮಗನನ್ನು ಹುಡುಕುವಾಗ ಆತನ ತಂದೆಗೆ ಆತನ ಬಟ್ಟೆಗಳು ಅವರ ಮನೆಯ ಸಮೀಪವಿರುವ ಹಣ್ಣಿನ ತೋಟದಲ್ಲಿರುವುದು ಕಂಡುಬಂದಿದೆ. ಆತನ ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದು, ನೆಲದ ಮೇಲೆ ರಕ್ತದ ಕಲೆಗಳಿವೆ ಎಂದು ಆತನ ತಂದೆ ಮಂಜೂರ್ ಅಹ್ಮದ್ ವಾಗೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸಾಧ್ಯವಾದರೆ ತನ್ನ ಮಗನನ್ನು ಕ್ಷಮಿಸಬೇಕೆಂದೂ, ಆತನ ದೇಹವನ್ನು ಹಿಂತಿರುಗಿಸಬೇಕೆಂದೂ ಆತನ ತಂದೆ ಮುಜಾಹಿದ್ದೀನ್​​ಗೆ ಮನವಿ ಮಾಡಿದ್ದಾರೆ.

ಆತನನ್ನು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರಾಮ್​ಭಾಮಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಶೋಪಿಯಾನ್ ಜಿಲ್ಲೆಯ ನಿವಾಸಿ ಮುಜಾಫರ್ ಮಂಜೂರ್ ಎಂಬುವವರ ಹೆಸರಿನಲ್ಲಿ ನೋಂದಾಯಿಸಲಾದ ವಾಹನವನ್ನು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಜೂರ್, ಪ್ರಾದೇಶಿಕ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು, ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಆತನನ್ನು ಉಗ್ರರು ಅಪಹರಿಸಿರಬಹುದೆಂಬ ಸಂಶಯವಿದ್ದು, ಆತನನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net