More

    15 ದಿನಗಳ ಫಿಲ್ಮ್‌ ಫೆಸ್ಟಿವಲ್‌- ಮನೆಯಲ್ಲಿದ್ದೇ ನೋಡಿ ಸಿನಿಮಾ- ಇಲ್ಲಿದೆ ಮಾಹಿತಿ…

    ನವದೆಹಲಿ: ಆಗಸ್ಟ್‌ ತಿಂಗಳು ಎಂದರೆ ಎಲ್ಲರಿಗೂ ದೇಶಾಭಿಮಾನ ಉಕ್ಕಿಹರಿಯುವ ಸಮಯವಿದು. ಸ್ವಾತಂತ್ರ್ಯೋತ್ಸವದ ಈ ಶುಭ ಗಳಿಗೆಯಲ್ಲಿ 15 ದಿನಗಳವರೆಗೆ ದೇಶಾಭಿಮಾನ ಉಕ್ಕಿಸುವ 15 ಚಲನಚಿತ್ರಗಳನ್ನು ಆನ್‌ಲೈನ್‌ನಲ್ಲಿಯೇ ಸವಿಯುವ ಅವಕಾಶವನ್ನು ನ್ಯಾಷನಲ್‌ ಫಿಲ್ಮ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಒದಗಿಸಿಕೊಟ್ಟಿದೆ.

    ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್‌ ಫಿಲ್ಮ್‌ ಫೆಸ್ಟಿವಲ್‌ ಹಮ್ಮಿಕೊಳ್ಳಲಾಗಿದ್ದು, ಮನೆಯಲ್ಲಿದ್ದುಕೊಂಡೇ ಚಲನಚಿತ್ರವನ್ನು ವೀಕ್ಷಿಸಬಹುದಾಗಿದೆ.

    ಕನ್ನಡದ ಪ್ರಸಿದ್ಧ ಸಿನಿಮಾ ‘ಹಗಲುವೇಷ’ ಸೇರಿದಂತೆ ಹಿಂದಿ, ಮರಾಠಿ, ತೆಲುಗು, ತಮಿಳು, ಬಂಗಾಳಿ, ಗುಜರಾತಿ ಮತ್ತು ಮಲಯಾಳಿ ಭಾಷೆಗಳ ಚಲನಚಿತ್ರಗಳನ್ನು ಮನೆಯಲ್ಲಿದ್ದುಕೊಂಡೇ ನೋಡುವ ಅವಕಾಶ ಸಿಗಲಿದೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಫ್‌ಡಿಸಿ), ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (ಎನ್‌ಎಫ್‌ಎಐ), ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಇಂಡಿಯಾ (ಸಿಎಫ್‌ಎಸ್‌ಐ) ಮತ್ತು ಫಿಲ್ಮ್ಸ್ ವಿಭಾಗದಿಂದ ಆಯ್ಕೆಗೊಂಡಿರುವ ಚಲನಚಿತ್ರಗಳು ಇದಾಗಿವೆ.

    ಇದಲ್ಲದೆ, ಸರ್ ರಿಚರ್ಡ್ ಅಟೆನ್ಬರೋ ಅವರ ಗಾಂಧಿ (1982) ಚಲನಚಿತ್ರವನ್ನು ಮೊದಲ ಬಾರಿಗೆ ಪ್ರದರ್ಶನಗೊಳಿಸಲಾಗಿದ್ದು, ದೃಷ್ಟಿ ಮತ್ತು ಶ್ರವಣದೋಷವುಳ್ಳ ಜನರು ಇದನ್ನು ನೋಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಈ ಲಿಂಕ್‌ನಲ್ಲಿ ಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.

    www.cinemasofindia.com

    ಚಿತ್ರಗಳ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್‌:

    https://pib.gov.in/PressReleseDetailm.aspx?PRID=1643832

    ಹೆಚ್ಚಿನ ಮಾಹಿತಿಗೆ ಹಾಗೂ ಚಿತ್ರ ವೀಕ್ಷಣೆಗೆ ಕೆಳಗಿನ ಟ್ವೀಟ್‌ನಲ್ಲಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts