7ನೇ ತರಗತಿ ವಿದ್ಯಾರ್ಥಿನಿ ಕಾಣೆ: ಕಾರಣನಾದವನನ್ನು ಪತ್ತೆಹಚ್ಚಿ ಕೊಂದ ಪಾಲಕರು! 6 ತಿಂಗಳ ಬಳಿಕ ಅರೆಸ್ಟ್​

dk (8) (1)
Published on

ಹೈದರಾಬಾದ್​: 7ನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಕಾಣೆಯಾಗಿದ್ದು, ಕಾಣೆಯಾಗಲು ಕಾರಣನಾದ ಅಕೆಯ ಸ್ನೇಹಿತನನ್ನು ಪತ್ತೆಹಚ್ಚಿದ ಪಾಲಕರು ಅತನನ್ನು ಕೊಂದು ನಾಗರ್ಜುನ ಸಾಗರ ನದಿಗೆ ಎಸೆದಿದ್ದಾರೆ. ಈ ಘಟನೆ ನಡೆದ ಆರು ತಿಂಗಳ ಬಳಿಕ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೌದು, ಘಟನೆ ನಡೆದಿರುವುದು ನೆರೆ ರಾಜ್ಯದಲ್ಲಿ ತೆಲಂಗಾಣದಲ್ಲಿ. ಇದೀಗ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯವನ್ನು ತಾವೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದ್​ ಮೂಲದ ನಿವಾಸಿ ಕುಮಾರ್(24)​ ಎಂಬ ಯುವಕ ಮೃತ.

ಸಿನಿಮಾ ಆಫರ್​ ಅಮೀಷಕ್ಕೆ ಒಳಾಗದ ಬಾಲಕಿ

ಸೋಷಿಯಲ್​​ ಮೀಡಿಯಾದಲ್ಲಿ ಪರಿಚಿತನಾದ ಯುವಕ ಕುಮಾರ್, ನಿನಗೆ ಸಿನಿಮಾ ಆಫರ್​ ಇದೆ. ಹೀಗಾಗಿ, ನನ್ನನ್ನು ಮೀಟ್​ ಮಾಡು ಎಂದು ಹೇಳಿದ್ದ. ಬಾಲಕಿ ತನ್ನ ಪಾಲಕರಿಗೆ ತಿಳಿಸದೆ ಯುವಕನ್ನು ಭೇಟಿಯಾಗಲು ಹೋಗಿದ್ದಳು. ಇದೇ ಅವಕಾಶವನ್ನು ಬಳಸಿಕೊಂಡ ಯುವಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆದರೆ, ಬಾಲಕಿ ಅಲ್ಲಿಂದ ಪರಾರಿಯಾಗಿ ಓಡಿ ಹೋಗಿದ್ದಾಳೆ. ರಸ್ತೆಯಲ್ಲಿ ಒಬ್ಬಂಟಿಯಾಗಿ ಅಯಾಸದಿಂದ ಇದ್ದ ಬಾಲಕಿನ್ನು ಗಮನಿಸಿದ ಪೊಲೀಸರು ಅಕೆಯನ್ನು ವಿಚಾರಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಬಾಲಕಿ ಅನಾಥೆ ಎಂದು ಹೇಳಿಕೊಂಡ ಕಾರಣ ಆಕೆಯನ್ನು ಸರ್ಕಾರಿ ಅನಾಥ ಶಾಲೆಗೆ ಬಿಡಲಾಗಿದೆ ಎಂದು ಪೊಲೀಸರು ಹೇಳಿದರು.

ಇತ್ತ ಮಗಳು ಕಾಣೆಯಾದ ಬಗ್ಗೆ ಚಿಂತಾಕ್ರಾಂತರಾದ ಪಾಲಕರು ಮಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಆಕೆಯ ಲ್ಯಾಪ್​ಟಾಪ್​ ಅನ್ನು ಪರಿಶೀಲಿಸಿದ್ದಾರೆ. ಲ್ಯಾಪ್​ಟಾಪ್​ನಲ್ಲಿ ಆಕೆಯ ಚಾಟಿಂಗ್​ ಗಮನಿಸಿದ ಪಾಲಕರು ಅತನನ್ನು ಪತ್ತೆಹಚ್ಚಿದ್ದಾರೆ. ಬಾಲಕಿ ತರ ಮೇಸೆಜ್ ಮಾಡಿ ಅತನನ್ನು ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ. ಅತ ನಿಜ ಹೇಳದ ಹಿನ್ನೆಲೆ ಕೊಲೆ ಮಾಡಿದ್ದಾರೆ. ಅತನ ದೇಹಕ್ಕೆ ಕಲ್ಲುಕಟ್ಟಿ, ಬಳಿಕ ನಾಗರ್ಜುನ ಸಾಗರ ಕಾಲುವೆಯಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕುಮಾರ್ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು 2023ರ ಜು.23ರಂದು ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಪ್ರಕರಣ ಬೇಧಿಸಲು ಪೊಲೀಸರು ಹರಸಾಹಸಪಟ್ಟರೂ ಸುಳಿವು ಸಿಕ್ಕಿರಲಿಲ್ಲ. ಈ ಹಿಂದೆ ಕುಮಾರ್ ಆಟೋರಿಕ್ಷಾ ಚಾಲಕರಾಗಿದ್ದರು. ಅಲ್ಲದೆ ಅತ ಕಾಣೆಯಾದಾಗಿನಿಂದ ಆಟೋ ಕೂಡ ಕಣ್ಮರೆಯಾಗಿತ್ತು. ಇತ್ತೀಚಿಗೆ ಕುಮಾರ್​ ಅವರ ಸಹೋದರ ಮಾವ ಇದೇ ಆಟೋವನ್ನು ಗಮನಿಸಿದ್ದಾನೆ. ಆಟೋದ ನಂಬರ್​ ಪ್ಲೇಟ್​ ಬದಲಾಯಿಸಿ ಬಳಸುತ್ತಿದ್ದರು. ಹೀಗಾಗಿ, ಆಟೋ ಕೂಡ ಯಾರ ಕಣ್ಣಿಗೂ ಬಿದ್ದಿರಿಲಿಲ್ಲ. ಆಟೋದ ಬಗ್ಗೆ ಕುಮಾರ್ ಅವರ ಮಾವ ಪೊಲೀಸರಿಗೆ ತಿಳಿಸಿದ್ದಾನೆ.

ಮತ್ತೆ ತನಿಖೆ ಆರಂಭಿಸಿದ ಅಧಿಕಾರಿಗಳು ಆಟೋದ 6 ತಿಂಗಳ ಹಿಂದೆ ಚಲನವಲದ ಬಗ್ಗೆ ಸಿಸಿಟಿವಿ ಪರಿಶೀಲಿಸಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಮನೆ ಮುಂದೆ ಆಟೋ ನಿಂತಿರುವುದು ಪತ್ತೆಯಾಗಿದೆ. ಅಲ್ಲದೆ, ಅನಾಥೆ ಅಂತ ಹೇಳಿದ್ದ ಬಾಲಕಿ ಕೂಡ ಒಂದು ತಿಂಗಳಿಂದೆ ಇದೇ ಮನೆಯ ಪಾಲಕರ ಮಡಿಲಿಗೆ ಸೇರಿದ್ದಾಳೆ. ಅನುಮಾಗೊಂಡ ಪೊಲೀಸರು ಮನೆಯವರನ್ನು ತನಿಖೆಗೆ ಒಳಪಡಿಸಿದ್ದು, ಕೃತ್ಯ ಬೆಳಕಿಗೆ ಬಂದಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net