ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ; 14 ಮಂದಿ ವಿರುದ್ಧ ಪ್ರಕರಣ ದಾಖಲು

harassment
Published on

ಮುಂಬೈ: ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಬಳಿಕ ಆಕೆಗೆ ಗರ್ಭನಿರೋಧಕ ಮಾತ್ರೆಯನ್ನು ಬಲವಂತವಾಗಿ ತಿನ್ನಿಸಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ವಯಸ್ಕ ಬಾಲಕಿ ಹಾಗೂ ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು 14 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏಳು ತಿಂಗಳ ಗರ್ಭಿಣಿ

ಈ ಕುರಿತು ಪ್ರತಿಕ್ರಿಯಿಸಿರುವ ಬೀಡ್​ ಠಾಣೆಯ ಪೊಲೀಸ್​ ಅಧಿಕಾರಿಯೊಬ್ಬರು 24 ವರ್ಷದ ವ್ಯಕ್ತಿಯೋರ್ವ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಗೆ ಆಮಿಷವೊಡ್ಡಿ ಪ್ರತಿನಿತ್ಯ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ.

Birth Control Pills
ಸಾಂದರ್ಭಿಕ ಚಿತ್ರ

ಬಾಲಕಿಗೆ ದಿಢೀರನೆ ಹೊಟ್ಟೆ ನೀವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಏಳು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ಬಳಿಕ ಬಾಲಕಿ ನಡೆದ ಘಟನೆಯನ್ನು ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಆರೋಪಿ ಬಳಿ ಪ್ರಶ್ನಿಸಿದಾಗ ಆತ ಇವರಿಬ್ಬರನ್ನು ಬೆದರಿಸಿ ಔರಂಗಬಾದ್​ಗೆ ಕರೆದೊಯ್ದಿದ್ದಾನೆ.

ಹೆಣ್ಣು ಮಗುವಿಗೆ ಜನ್ಮ

ಬಳಿಕ ಅಲ್ಲಿ ಬಾಲಕಿಗೆ ಗರ್ಭನಿರೋಧಕ ಔಷಧಿಗಳನ್ನು ಕೊಡಲಾಗಿದ್ದು, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆ ಭ್ರೂಣವನ್ನು ಹತ್ಯೆ ಮಾಡಲಾಗಿದ್ದು ತಾಯಿ-ಮಗಳು ಇಬ್ಬರಿಗು ವಿಚಾರ ಬಾಯ್ಬಿಡದಂತೆ ಬೆದರಿಸಿ ಆರೋಪಿಗಳು ಪುಣೆಗೆ ಕಳುಹಿಸಿದ್ದಾರೆ. ಸಂಬಂಧಿಕರೊಬ್ಬರ ಸಹಾಯದಿಂದ ಬಾಲಕಿ ಹಾಗೂ ಆಕೆಯ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಘಟನೆ ಸಂಬಂಧ ಪ್ರಮುಖ ಆರೋಪಿ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದ 14 ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮಾರಿಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬೀಡ್​ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net