More

    ಪ್ರವಾಹದಲ್ಲಿ ಸಿಲುಕಿ ಬಸ್​ ಪಲ್ಟಿ; ಕ್ರೇನ್​ ಮೂಲಕ ರಕ್ಷಣೆ

    ಅಮೃತಸರ: ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣ ಕಳೆದ ಕೆಲವು ದಿನಗಳಿಂದ ಆರ್ಭಟಿಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದೀಗ ಘಟನೆಯೊಂದರಲ್ಲಿ ಬಸ್​ ಒಂದು ಪ್ರವಾಹದ ನೀರಿನಲ್ಲಿ ಸಿಲುಕಿ ಪಲ್ಟಿಯಾಗಿದ್ದು, ಜೀವ ಉಳಿಸಿಕೊಳ್ಳಲು ಜನ ಪರದಾಡಿದ ಘಟನೆ ಪಂಜಾಬಿನಲ್ಲಿ ನಡೆದಿದೆ.

    ಘಟನೆಯೂ ಪಂಜಾಬ್​ನ ಅಂಬಾಲಾ-ಯಮುನಾನಗರ ಹೆದ್ದಾರಿಯಲ್ಲಿ ನಡೆದಿದ್ದು, ಪ್ರವಾಹದ ಹೊಡೆತಕ್ಕೆ ಸಿಲುಕಿ ಬಸ್​ ಪಲ್ಟಿಯಾಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕರನ್ನು ಕ್ರೇನ್​ನ ಮೂಲಕ ರಕ್ಷಿಸುತ್ತಿರುವುದು ಕಂಡು ಬಂದಿದೆ. ಬಸ್​ನಲ್ಲಿ 70 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ 27 ಮಂದಿಯನ್ನು ರಕ್ಷಿಸಲಾಗಿದೆ.

    bus over turn

    ಇದನ್ನೂ ಓದಿ: ಸರಣಿ ಅಪಘಾತ; ಕೆಕೆಆರ್​ಟಿಸಿ ಬಸ್​ ಚಾಲಕ ಮೃತ್ಯು

    ಕಳೆದ ಮೂರು ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭೂ ಕುಸಿತ ಉಂಟಾಗಿ ಹಲವು ಜೀವಗಳನ್ನು ಬಲಿ ಪಡೆದಿದೆ. ಪಂಜಾಬ್​ನಲ್ಲಿ ಸೋಮವಾರ ಅತಿ ಹೆಚ್ಚು ಮಳೆಯಾಗಲಿದ್ದು, ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ.

    ಪಂಜಾಬ್​ನಲ್ಲಿ ಕಳೆದ ಎರಡು ದಿನಗಳಲ್ಲಿ ಶೇ. 70ರಷ್ಟು ಮಳೆಯಾಗಿದ್ದು, ಕಳೆದ 50 ಘಂಟೆಗಳಲ್ಲಿ ಮೊಹಾಲಿ, ಚಂಢೀಗರ್​ ಸೇರಿದಂತೆ ಶೇ. 50ರಷ್ಟು ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts