ಸರಣಿ ಅಪಘಾತ; ಕೆಕೆಆರ್​ಟಿಸಿ ಬಸ್​ ಚಾಲಕ ಮೃತ್ಯು

Road Accident
Published on

ಕಲಬುರಗಿ: ಕಾರು, ಬಸ್​ ಹಾಗೂ ಬೈಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಕೆಆರ್​ಟಿಸಿ ಸಾರಿಗೆ ಸಂಸ್ಥೆಯ ನೌಕರ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹೊರವಲಯದಲ್ಲಿ ನಡೆದಿದೆ.

ಜೇವರ್ಗಿ ಪಟ್ಟಣದ ಹೊರವಲಯದ ಬಸ್​ ಡಿಪೋ ಬಳಿ ಘಟನೆ ನಡೆದಿದ್ದು, ಕರ್ತವ್ಯಕ್ಕೆಂದು ತೆರಳುತ್ತಿದ್ದ ಸಾರಿಗೆ ಚಾಲಕ ಲಾಲ್‌ಹುಸೇನ್ ಮನಿಯಾರ್ ಬೈಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ.

Road Accident

ಮಾರುತಿ ಸ್ವಿಫ್ಟ್​ ಡಿಸೈರ್​ ಕಾರು ವೇಗವಾಗಿ ಬರುತ್ತಿದ್ದ ಪರಿಣಾಮ ಮೊದಲಿಗೆ ಮುಂಬದಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರು ಬರುತ್ತಿದ್ದ ಕೆಕೆಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ ಹಗೂ ಬಸ್​ನ ಮುಂಬದಿ ಜಖಂಗೊಂಡಿದೆ.

ಸ್ವಿಫ್ಟ್​ ಕಾರಿನಲ್ಲಿ ಸಂಚರಿಸುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಜೇವರ್ಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net