ಸುಟ್ಟು ಕರಕಲಾದ ಸ್ಥಿತಿಯಲ್ಲಿ 14ರ ಬಾಲಕಿಯ ಮೃತದೇಹ ಪತ್ತೆ: ಆರೋಪಿಗಳ ಸುಳಿವು ಸಿಕ್ಕಿದ್ದು ಹೀಗೆ..

rajasthan brick kin
Published on

ಭಿಲ್ವಾರಾ: 14 ವರ್ಷದ ಬಾಲಕಿಯ ಸುಟ್ಟ ಮೃತದೇಹ ಇಟ್ಟಿಗೆ ಗೂಡಿನಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಭಿಲ್ವಾರಾ ಬಳಿ ನಡೆದಿದೆ. ಭೀಕರ ಘಟನೆಯು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಜಗಳದ ವೇಳೆ ಪತ್ನಿಯ ಬೆರಳನ್ನು ಕಚ್ಚಿ ಕಚ್ಚಿ ತಿಂದ ಪತಿರಾಯ..!

ಸಾಮೂಹಿಕ ಅತ್ಯಾಚಾರದ ಬಳಿಕ ಆಕೆಯನ್ನು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಭಿಲ್ವಾರದ ಇಟ್ಟಿಗೆ ಗೂಡುವೊಂದರಲ್ಲಿ ಅಪ್ರಾಪ್ತ ಬಾಲಕಿಯ ಸುಟ್ಟ ಅವಶೇಷಗಳು ಬುಧವಾರ ಪತ್ತೆಯಾಗಿವೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖಾ ತಂಡಗಳು ಸ್ಥಳಕ್ಕೆ ಆಗಮಿಸಿ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

ಬಾಲಕಿಯು ತನ್ನ ತಾಯಿಯೊಂದಿಗೆ ಮೇಕೆಗಳನ್ನು ಮೇಯಿಸಲು ಹೋಗಿದ್ದು, ಈ ವೇಳೆ ತಾಯಿಯಿಂದ ಬೇರ್ಪಟ್ಟಿದ್ದಾಳೆ. ಸಂಜೆಯಾದರೂ ಬಾಲಕಿಯು ಮನಗೆ ಹಿಂತಿರುಗದಿದ್ದಾಗ, ಆಕೆಯ ಮನೆಯವರು ಮತ್ತು ಗ್ರಾಮಸ್ಥರು ಅವಳನ್ನು ಮಂಗಳವಾರ ಸಾಯಂಕಾಲದವರೆಗೆ ಹುಡುಕಿದ್ದಾರೆ. 

ಕೊನೆಗೆ ರಾತ್ರಿ 8 ಗಂಟೆ ಸುಮಾರಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು 10 ಗಂಟೆಯ ಸುಮಾರಿಗೆ, ಗ್ರಾಮದ ಹೊರಗಿನ ಇಟ್ಟಿಗೆ ಗೂಡಿನಲ್ಲಿ ಕುಲುಮೆ ಉರಿಯುತ್ತಿದ್ದನ್ನು ನೋಡಿದ್ದಾರೆ, ಮಳೆಗಾಲದಲ್ಲಿ ಈ ಕುಲುಮೆ ಉರಿಯುವುದಿಲ್ಲ. ಅನುಮಾನ ಬಂದ ಮೇಲೆ ಕುಲುಮೆಯ ಬಳಿ ಹೋಗಿ ನೋಡಿದ್ದು, ಕಾಣೆಯಾದ ಬಾಲಕಿಯ ಶೂ, ಬೆಳ್ಳಿ ಬಳೆ, ಮೂಳೆಯ ತುಂಡುಗಳೂ ಬೆಂಕಿಯಲ್ಲಿ ಪತ್ತೆಯಾಗಿವೆ.

 
ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದ ನಂತರ ಆಕ್ರೋಶಗೊಂಡ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಮೂವರು ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು,ಸಾಮೂಹಿಕ ಅತ್ಯಾಚಾರದ ಬಳಿಕ ಆಕೆಯನ್ನು ಸುಟ್ಟಿರುವ ಶಂಕೆ ವ್ಯಕ್ತವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net