ಜಗಳದ ವೇಳೆ ಪತ್ನಿಯ ಬೆರಳನ್ನು ಕಚ್ಚಿ ಕಚ್ಚಿ ತಿಂದ ಪತಿರಾಯ..!

husband wife
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಜಗಳದ ವೇಳೆ ಪತ್ನಿಯ ಬೆರಳನ್ನೇ ಪತಿರಾಯ ಕಚ್ಚಿ ತಿಂದಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಖ್ಯಾತ ರಂಗಭೂಮಿ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಮತಾ ಗುಡೂರ ಇನ್ನಿಲ್ಲ…

ಘಟನೆಯಲ್ಲಿ ಪುಷ್ಪಾ(40) ಮಹಿಳೆಗೆ ಗಾಯಗಳಾಗಿದ್ದು, ಪತಿ ವಿಜಯಕುಮಾರ್​​​ನೇ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಪತ್ನಿಗೆ ಕಿರುಕುಳ, ಮಾನಸಿಕ ಮತ್ತು ದೈಹಿಕ ಹಿಂಸೆ ಆರೋಪಡಿ ದೂರು ದಾಖಲಾಗಿದೆ. ದಂಪತಿಗಳಿಗೆ 23 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವಿವಾಹವಾದ ಕೆಲ ವರ್ಷಗಳಲ್ಲೇ ಆತನ ಕಾಟತಾಳಲಾರದೇ ಪತ್ನಿಯು ಒಬ್ಬ ಮಗನ ಜೊತೆ ಬೇರೆ ಮನೆ ಮಾಡಿ ವಾಸವಿದ್ದರು.

ಕಳೆದ‌ 28ನೇ ತಾರೀಖು ಪತ್ನಿ ಇದ್ದ ಮನೆಗೆ ಹೋಗಿ ಜಗಳ ತೆಗೆದಿದ್ದ ಆರೋಪಿಯು, ಪತ್ನಿಯ ಎಡಗೈ ಬೆರಳನ್ನು ಕಚ್ಚಿ ತಿಂದಿದ್ದಾನೆ. ಅಲ್ಲದೇ ರೌಡಿಶೀಟರ್​​ಗಳನ್ನ ಬಿಟ್ಟು ಕೊಲೆ ಬೆದರಿಕೆಯನ್ನು ಹಾಕಿದ್ದಾನೆ. ಸದ್ಯ, ಪತಿರಾಯನ ವಿರುದ್ಧ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದು, ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net