ಈ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆದ ರೈತ ಇವರೊಬ್ಬರೇ! ಲಾಭವನ್ನು ಊಹೆ ಮಾಡಲು ಪ್ರಯತ್ನಿಸಿ…

tomato farmer gadag
ಬಸವನಗೌಡ ತಿಮ್ಮನಗೌಡ, ರೈತ
Published on

ಗದಗ: ಇಡೀ ಗದಗ ಜಿಲ್ಲೆಯಲ್ಲಿ ಇವರೊಬ್ಬರೇ ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದು, ಅನೇಕ ಕಡೆಗಳಲ್ಲಿ ರೈತರು ಬೆಲೆ ಇಲ್ಲ ಎಂದು ಬೆಳೆಯನ್ನೇ ಬೆಳೆದಿಲ್ಲ. ಇನ್ನೂ ಕೆಲಕಡೆಗಳಲ್ಲಿ ಟೊಮ್ಯಾಟೋ ಬೆಳೆ ನಾಶವೂ ಆಗಿದೆ. ಹೀಗೆ ನಾನಾ ಕಾರಣದಿಂದಾಗಿ ಇದೀಗ ಇಡೀ ಗದಗ ಜಿಲ್ಲೆಯಲ್ಲಿ ಇವರೊಬ್ಬರೇ ಟೊಮ್ಯಾಟೋ ಫಸಲನ್ನು ತೆಗೆದಿದ್ದಾರೆ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ, ಬಸವನಗೌಡ ತಿಮ್ಮನಗೌಡರು ಈ ಬಾರಿ ಬಂಪರ್ ಲಾಭ ಹೊಡೆದಿದ್ದಾರೆ. ಇವರು, ಹನಿ ನೀರಾವರಿ ಮೂಲಕ ಟೊಮ್ಯಾಟೋ ಬೆಳೆದಿದ್ದು, ಸಮೃದ್ಧವಾಗಿ ಬೆಳೆದ ಟೊಮ್ಯಾಟೋ ಹಣ್ಣುಗಳಿಂದಾಗಿ ಭರ್ಜರಿ ಲಾಭ ಬಂದಿದೆ. ಈ ಮೂಲಕ ರೈತರೊಬ್ಬರ ಬಾಳು ಬಂಗಾರವಾಗಿದೆ ಎಂದೇ ಹೇಳಬಹುದು.

Tomato Crop

ಬಸವನಗೌಡ ತಿಮ್ಮೇಗೌಡರು, ಅವರ ಮಕ್ಕಳು ಹಾಗೂ ಅವರ ಕುಟುಂಬಸ್ಥರು ಎಲ್ಲರೂ ಸೇರಿಕೊಂಡು ಟೊಮ್ಯಾಟೋ ನಿರ್ವಹಣೆ ಮಾಡಿದ್ದಾರೆ. ಹಗಲು ರಾತ್ರಿ ಎನ್ನದೆ ಟೊಮ್ಯಾಟೋ ಬೆಳೆಯನ್ನು ಈ ಮನೆಯ ಮಕ್ಕಳು ಕಾದಿದ್ದಾರೆ. ಸದ್ಯ, ಗದಗ ಮಾರುಕಟ್ಟೆಯಲ್ಲಿ ಟೊಮ್ಯಾಟೋಹಣ್ಣುಗಳಿಗೆ ಬಾರಿ ಬೇಡಿಕೆ ಇದ್ದು, ಬಹುತೇಕ ಎಲ್ಲಾ ಟೊಮ್ಯಾಟೋಗಳನ್ನು ಹೊರಗಿನಿಂದ ಆಮದು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವರು ತಾವೇ ಖುದ್ದಾಗಿ ಮಾರುಕಟ್ಟೆಗೆ ಹೋಗಿ ಟೊಮ್ಯಾಟೋ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, "50 ವರ್ಷದ ಕೃಷಿ ಕಾಯಕದಲ್ಲಿ ಇಷ್ಟೊಂದು ಬೆಲೆ ಕಂಡಿಲ್ಲಾ. ಒಂದುವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆದು ಬಂಪರ್ ಬೆಲೆ ಲಭಿಸಿದೆ. ಒಂದುವರೆ ಎಕರೆ ಜಮೀನಿನಲ್ಲಿ ಐದು ಲಕ್ಷ ಲಾಭ ಬಂದಿದೆ. ನಮಗೆ ಇನ್ನೂ 15 ಲಕ್ಷ ಬರುವ ನಿರೀಕ್ಷೆ ಇದೆ. ಒಂದುವರೆ ಎಕರೆ ಟೊಮ್ಯಾಟೋ ಬೆಳೆಸಲು ಕೇವಲ 70 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ" ಎಂದಿದ್ದಾರೆ. ಇವರ ಮನೆಯಲ್ಲಿ ಪಿಯುಸಿ, ಹಾಗೂ ಐಐಟಿ ಮುಗಿಸಿದ ಮಕ್ಕಳಿದ್ದು, ಇದೀಗ ಟೊಮ್ಯಾಟೋ ಕೃಷಿ, ಅವರಿಗೆ ದಾರಿ ದೀಪವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net