VIDEO| ಬೀದಿ ನಾಯಿಗೆ ಆಹಾರ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೃದ್ಧ: ಮುಂದೆ ನಡೆದದ್ದು..?

dog
ಸಾಂದರ್ಭಿಕ ಚಿತ್ರ
Published on

ಗಾಜಿಯಾಬಾದ್‌: ಬೀದಿ ನಾಯಿಗೆ ಬೇರೆಡೆ ಊಟ ಹಾಕಿ, ಇಲ್ಲಿ ಹಾಕಬೇಡಿ ಎಂದಿದ್ದಕ್ಕೆ ಯುವತಿಯೊಬ್ಬಳು ವೃದ್ಧನಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಪಂಚಶೀಲ್ ವೆಲ್ಲಿಂಗ್ಟನ್ ಸೊಸೈಟಿಯಲ್ಲಿ ಬೀದಿ ನಾಯಿಗೆ ಆಹಾರ ನೀಡಿದ ಮಹಿಳೆಯ ಕೃತ್ಯಕ್ಕೆ ವೃದ್ಧ ಆಕ್ಷೇಪ ವ್ಯಕ್ತಪಡಿಸಿದ್ದು. ಸಿಮ್ರಾನ್(23) ಎಂಬಾಕೆಯೇ ರೂಪನಾರಾಯಣ ಮೆಹ್ರಾ (79) ಎಂಬುವರ ಮೇಲೆ ಹಲ್ಲೆ ನಡೆಸಿದ್ದಾಳೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕೆ ಆತನಿಗೆ ದೊಣ್ಣೆಯಿಂದ ಥಳಿಸಿದ್ದಾಳೆ.


ವೃದ್ಧನ ರಕ್ಷಣೆಗೆ ಬಂದವರಿಗೂ ಆಕೆ ನಿಂದಿಸಿದ್ದು, ಕೂಡಲೇ ಈ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಪೊಲೀಸರ ಗಮನಕ್ಕೆ ತರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವೆವ್​​ ಸಿಟಿಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಅಂದಹಾಗೆ, ದೆಹಲಿಯಲ್ಲಿ ನಾಯಿಗಾಗಿ ನಡೆದ ಜಗಳ ಇದೇ ಮೊದಲಲ್ಲ. ಈ ಹಿಂದೆಯೂ ನಾಯಿಗೋಸ್ಕರ ಕಲಹಗಳ ನೋಯ್ಡಾ, ಗುರುಗ್ರಾಮ್, ಮತ್ತಿತರ ಕಡೆ ನಡೆದಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net