

ದೆಹಲಿ: ಅಪ್ರಾಪ್ತೆಗೆ 20 ಬಾರಿ ಇರಿದು, ನಂತರ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ದೆಹಲಿಯ ಶಹಾಬಾದ್ ಡೈರಿ ಪ್ರದೇಶದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಾಕ್ಷಿ(16) ಎಂದು ಗುರುತಿಸಲಾಗಿದ್ದು, ಸಾಹಿಲ್ ಆಕೆಯನ್ನು ಹತ್ಯೆಗೈದ ಆರೋಪಿಯಾಗಿದ್ದು ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆರೋಪಿ ಸಾಹಿಲ್, ತನ್ನ ಮನೆಯ ಹೊರಗೆ ಅಪ್ರಾಪ್ತೆಗೆ ಇರಿದ ನಂತರ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಆಕೆಯ ಮುಖವನ್ನು ಜಜ್ಜಿ ಹಾಕಿದ್ದಾನೆ. ದಾರಿಹೋಕರ ಮುಂದೆಯೇ ಈ ಭೀಕರ ಕೃತ್ಯ ನಡೆದಿದ್ದು, ಅಸಹಾಯಕತೆಯಿಂದ ದುಷ್ಕರ್ಮಿಯು ಹೇಯ ಕೃತ್ಯ ನಡೆಸುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡರು.
ಈ ಕುರಿತು ಮಾತನಾಡಿರುವ ಪೊಲೀಸರು, ಮೃತ ಸಾಕ್ಷಿ ಹಾಗೂ ಆಕೆಯ ಬಾಯ್ಫ್ರೆಂಡ್ ಸಾಹಿಲ್ ನಿನ್ನೆ ಸಾಯಂಕಾಲ ಜಗಳವಾಡಿದ್ದರು. ಈ ಹಿನ್ನೆಲೆ ಆಕೆಯನ್ನು ಆತ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.(ಏಜನ್ಸೀಸ್)