ತಾಯಿ ಗದರಿದ್ದಕ್ಕೆ ತನ್ನ ಜೀವನವನ್ನೇ ಅಂತ್ಯಗೊಳಿಸಿದ 13 ವರ್ಷದ ಬಾಲಕಿ

Crime
Published on

ಗುಜರಾತ್​: ತಾಯಿ ಗದರಿದ್ದಕ್ಕೆ ಮನನೊಂದ 13 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುಜರಾತ್​ನ ಜಾಮ್​ನಗರ ಬಳಿ ನಡೆದಿದೆ.

ಮೃತ ಬಾಲಕಿಯನ್ನು ಜೇನಿಶಾ ಅಭಂಗಿ ಎಂದು ಗುರುತಿಸಲಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೇನಿಶಾ ಹಾಗೂ ಆಕೆಯ ತಾಯಿ ಊರ್ಮಿಳಾ ಬೇಸಿಗೆ ರಜೆ ಕಳೆಯಲೆಂದು ಮಾವನ ಮನೆಗೆ ಬಂದಿದ್ದರು. ಈ ವೇಳೆ ಬಾಲಕಿಯು ಮೊಬೈಲ್​ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದನ್ನು ಗಮನಿಸಿದ ಊರ್ಮಿಳಾ ಆಕೆಗೆ ಗದರಿಸಿದ್ದಳು. ತದನಂತರ ಸಿಟ್ಟಿಗೆದ್ದ ಬಾಲಕಿ ಕೊಠಡಿಯೊಳಗೆ ಹೋಗಿದ್ದಳು.

ಆದರೆ ಮನೆಯವರು ಹಾಗೂ ಬಾಲಕಿಯ ತಾಯಿಯು ಆಕೆ ಆಟವಾಡಲು ಹೊರಗಡೆ ಹೋಗಿದ್ದಾಳೆಂದು ಭಾವಿಸಿದ್ದರು. ಆಕೆ ವಾಪಸ್ ಬಾರದೆ ಇದ್ದಾಗ ಕುಟುಂಬದವರು ತಮ್ಮ ನೆರೆಹೊರೆಯವರು ಹಾಗೂ ಬಾಲಕಿಯ ಸ್ನೇಹಿತರ ಬಳಿ ಜೇನಿಶಾ ಬಗ್ಗೆ ವಿಚಾರಿಸಿದ್ದರು. ಕೊನೆಗೆ ರೂಮ್​ ಬಾಗಿಲು ತೆರೆದು ನೋಡಿದಾಗ ಬಾಲಕಿಯು ಫ್ಯಾನ್​ಗೆ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಅದಾಗಲೇ ಮೃತಪಟ್ಟಿದ್ದಳು. ಇನ್ನು ಘಟನೆ ಕುರಿತು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net