ಕನ್ನಡದಲ್ಲಿ ಮಿಂಚು ಹರಿಸಲಿದ್ದಾನೆ ಮಲಯಾಳಂ ಮುರಳಿ!

Minchu
Published on

ಈಗಾಗಲೇ ಬಹುಭಾಷಾ ಸಿನಿಮಾ ಪರಿಕಲ್ಪನೆ ವರ್ಕೌಟ್​ ಆಗುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಆಗಮಿಸುತ್ತಿವೆ. ಇದೀಗ ಮಲಯಾಳಂನ ಮತ್ತೊಂದು ಸಿನಿಮಾ ಕನ್ನಡದ ಜತೆಗೆ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ.

ಮಲಯಾಳಂನಲ್ಲಿ ‘ಮಿನ್ನಾಲ್​ ಮುರಳಿ’ ಶೀರ್ಷಿಕೆಯಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ತೋವಿನ್​ ಥಾಮಸ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್​ ಹೀರೋ ಕಾನ್ಸೆಪ್ಟ್ನ ಈ ಚಿತ್ರವನ್ನು ಬಸಿಲ್​ ಜೋಸೆಫ್​ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ 5 ಭಾಷೆಗಳ ಪೋಸ್ಟರ್​ ಬಿಡುಗಡೆ ಮಾಡಿಕೊಂಡಿದೆ.

ಮಲಯಾಳಂ ಮತ್ತು ತಮಿಳಿನಲ್ಲಿ ‘ಮಿನ್ನಾಲ್​ ಮುರಳಿ’, ಕನ್ನಡಲ್ಲಿ ಮಿಂಚು ಮುರಳಿ, ತೆಲುಗಿನಲ್ಲಿ ಮೆರುಪು ಮುರಳಿ ಮತ್ತು ಹಿಂದಿಯಲ್ಲಿ ಮಿಸ್ಟರ್ ಮುರಳಿಯಾಗಿ ಸಿನಿಮಾ ತಯಾರಾಗಲಿದೆ. ಸದ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ತಂಡ ಆಗಸ್ಟ್ 31ಕ್ಕೆ ಟೀಸರ್ ಬಿಡುಗಡೆ ಮಾಡಿಕೊಳ್ಳಲಿದೆ.

ಕನ್ನಡದಲ್ಲಿ ಚಿತ್ರದ ಈ ಪೋಸ್ಟರ್​ ಅನ್ನು ಪ್ರಿಯಾಂಕಾ ಉಪೇಂದ್ರ, ಕಾರ್ತಿಕ್​ ಜಯರಾಮ್​ ಸೇರಿ ಹಲವರು ಹಂಚಿಕೊಂಡು ತಂಡಕ್ಕೆ ಶುಭಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net