

ಲಾಕ್ಡೌನ್ನಿಂದ ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಕೆಲಸಗಳಿಗೆ ಇದೀಗ ಚಾಲನೆ ಸಿಕ್ಕಿದ್ದು, ಸಿನಿಮಾ ತಂಡಗಳು ಮತ್ತೆ ಕ್ಯಾಮರಾ ಆನ್ ಮಾಡಿವೆ. ಇದೀಗ ಕೆಜಿಎಫ್ ಚಾಪ್ಟರ್ 2 ತಂಡವೂ ಇಂದಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೀಗ ಮೊದಲ ದಿನದ ಶೂಟಿಂಗ್ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಇಂದಿನಿಂದ ‘ಕೆಜಿಎಫ್ ಚಾಪ್ಟರ್ 2’ ಶೂಟಿಂಗ್ ಶುರು
ಹೌದು, ಈ ಹಿಂದೆ ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದರು. ರಾಕಿ ಭಾಯಿ ಕಥೆಯನ್ನು ನಿರೂಪಣೆ ಮಾಡಿದ್ದರು. ಜತೆಗೆ ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಅನಂತ್ನಾಗ್ ಕೆಜಿಎಫ್ ಸಿನಿಮಾದಿಂದ ಹೊರನಡೆದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಳಿಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅದೆಲ್ಲದಕ್ಕೂ ಫೋಟೋ ಸಮೇತ ಉತ್ತರ ಸಿಕ್ಕಿದೆ.
ಮೊದಲ ಭಾಗದಲ್ಲಿ ಅನಂತ್ ನಾಗ್ ಮಾಡಿದ್ದ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್ ರೈ ಮಾಡಲಿದ್ದಾರೆ. ಈಗಾಗಲೇ ಮಿನರ್ವ ಮಿಲ್ನಲ್ಲಿ ಶೂಟಿಂಗ್ ಸಹ ಶುರುವಾಗಿದ್ದು, ರೈ ಮತ್ತು ಮಾಳವಿಕಾ ಅವಿನಾಶ್ ಸಹ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ ಆನಂದ್ ಇಂಗಳಗಿ ಲುಕ್ನಲ್ಲಿ ಪ್ರಕಾಶ್ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೂ ಫೋಟೋವೊಂದು ರಿವೀಲ್ ಆಗಿದೆ.
ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ.