ಇಂದಿನಿಂದ ‘ಕೆಜಿಎಫ್​ ಚಾಪ್ಟರ್ 2’ ಶೂಟಿಂಗ್​ ಶುರು

ns6NICnJ
Published on

ಲಾಕ್​ಡೌನ್​ನಿಂದ ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಕೆಲಸಗಳಿಗೆ ಇದೀಗ ಚಾಲನೆ ಸಿಕ್ಕಿದ್ದು, ಸಿನಿಮಾ ತಂಡಗಳು ಮತ್ತೆ ಕ್ಯಾಮರಾ ಆನ್​ ಮಾಡಿವೆ. ಇದೀಗ ಕೆಜಿಎಫ್​ ಚಾಪ್ಟರ್ 2 ತಂಡವೂ ಇಂದಿನಿಂದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೃಹತ್​ ಸೆಟ್​ ಹಾಕಲಾಗಿದ್ದು, ಇಡೀ ತಂಡ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್​ ಮುಗಿದಿದ್ದು, ಶೇ 90 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ.

ಇನ್ನು ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್​ ದತ್ ಅವರ ಭಾಗದ ಶೂಟಿಂಗ್​ ಬಾಕಿ ಉಳಿದಿದ್ದು, ಈಗತಾನೇ ಕ್ಯಾನ್ಸರ್​ನಿಂದ ಚೇತರಿಸಿಕೊಂಡ ಬಳಿಕವಷ್ಟೇ ಅವರ ಭಾಗದ ಚಿತ್ರೀಕರಣ ಮಾಡಿಕೊಳ್ಳಲು ತಂಡ ಯೋಜನೆ ರೂಪಿಸಿದೆ.

ಸಂಗೀತದ ಕೆಲಸವೂ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸಕ್ಕೂ ಈಗಾಗಲೇ ಚಾಲನೆ ಸಿಕ್ಕಿದೆ. ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದು, ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net