ಕೋಲುಮಂಡೆ ವಿವಾದ: ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ದೂರು

Kolumande
Published on

ಬೆಂಗಳೂರು: “ಕೋಲುಮಂಡೆ ಜಂಗಮ ದೇವರು” ರ‍್ಯಾಪ್​ ಸಾಂಗ್ ವಿವಾದ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ರ‍್ಯಾಪರ್​ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

ಹಿಂದು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಜಾನಪದ ಗೀತೆಯನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಜರಂಗದಳ ಮುಖಂಡ ತೇಜಸ್ ಗೌಡ ದೂರು ನೀಡಿದ್ದು, ಪೊಲೀಸರು ಎನ್​ಸಿಆರ್​ ದಾಖಲಿಸಿದ್ದಾರೆ.

ಆ. 22ರಂದು ಯೂಟ್ಯೂಬ್‌ನಲ್ಲಿ “ಕೋಲುಮಂಡೆ ಜಂಗಮ ದೇವರು” ರ‍್ಯಾಪ್​ ಸಾಂಗ್ ಅನ್ನು ಚಂದನ್​ ಶೆಟ್ಟಿ ಬಿಡುಗಡೆ ಮಾಡಿದ್ದರು. ಈ ಬಗ್ಗೆ ವಿವಾದ ಶುರುವಾಗುತ್ತಿದ್ದಂತೆ ನಿನ್ನೆ(ಮಂಗಳವಾರ) ಸ್ಪಷ್ಟನೆ ನೀಡಿದ್ದ ಚಂದನ್​ ಶೆಟ್ಟಿ, ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡುವ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ. ಇದರಿಂದ ನಿಮಗೆ ನೋವಾಗಿದ್ದರೆ ನಮ್ಮ ಇಡೀ ತಂಡದ ಪರವಾಗಿ ಕ್ಷಮೆಯಾಚಿಸುತ್ತೇನೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net