More

    ವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!

    ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾದ “ಕೋಲುಮಂಡೆ” ರ‍್ಯಾಪ್​ ಸಾಂಗ್ ವಿವಾದ ಕಿಡಿ ಹೊತ್ತಿಸಿದ ಬೆನ್ನಲ್ಲೇ ರ‍್ಯಾಪರ್​ ಚಂದನ್​ ಶೆಟ್ಟಿ ಸ್ಪಷ್ಟನೆ ನೀಡುವ ಮೂಲಕ ಕ್ಷಮೆಯನ್ನು ಕೇಳಿದ್ದಾರೆ. ಆದರೆ, ಅಚ್ಚರಿಯೆಂದರೆ ವಿವಾದದ ಬೆನ್ನಲ್ಲೇ ಚಂದನ್​ಗೆ ಬಂಪರ್​ ಹೊಡೆದಿದ್ದು, ಕೋಲುಮಂಡೆ ಸಾಂಗ್​ ಯೂಟ್ಯೂಬ್​ನಲ್ಲಿ ಟ್ರೆಂಡ್​ ಆಗಿದೆ.

    ಕೆಲವೇ ಕ್ಷಣಗಳಲ್ಲಿ ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಸ್ಥಾನವನ್ನು ಕೋಲುಮಂಡೆ ಸಾಂಗ್​ ಗಿಟ್ಟಿಸಿಕೊಂಡಿದೆ. ವಿವಾದವೂ ಕೂಡ ಚಂದನ್​ಗೆ ವರವಾಗಿಯೇ ಪರಿಣಮಿಸಿದೆ. ಅಲ್ಲದೆ, ವೈರಲ್​ ಆಗುತ್ತಿರುವ ಸಾಂಗ್​ಗೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಮಾದಪ್ಪನ ಗೀತೆಗೆ ಅಪಮಾನ: ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಚಾಮರಾಜನಗರ ಯುವಕರು!

    ತಿಂಗಳ 22 ರಂದು ಯೂಟ್ಯೂಬ್‌ನಲ್ಲಿ ಕೋಲುಮಂಡೆ ಎಂಬ ಸಾಂಗ್​ ಬಿಡುಗಡೆ ಮಾಡಿದ್ದರು. ಇದೀಗ ಹಾಡಿನ ಬಗ್ಗೆ ಚಾಮರಾಜನಗರದ ಜಾನಪದ ಕಲಾವಿದರು ಕಿಡಿಕಾರಿದ್ದಾರೆ. ಮಾದಪ್ಪನ ಗೀತೆಯಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲತೆ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!

    ಇದರ ಬೆನ್ನಲ್ಲೇ ಚಂದನ್​ ಸಹ ಕ್ಷಮೆಯಾಚಿಸಿ, ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಸಾಂಗ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೋಲುಮಂಡೆ ಸಾಂಗ್​ ವಿವಾದ: ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದ ರ‍್ಯಾಪರ್​ ಚಂದನ್​ ಶೆಟ್ಟಿ!

    ಇಷ್ಟೆಲ್ಲಾ ವಿವಾದದ ಹೊಗೆ ಹೊತ್ತಿದ ಬೆನ್ನಲ್ಲೇ ಕೋಲುಮಂಡೆ ಸಾಂಗ್​ ಯೂಟ್ಯೂಬ್​ನಲ್ಲಿ ಮೊಲದನೇ ಸ್ಥಾನ ಗಿಟ್ಟಿಸಿರುವುದು ಚಂದನ್​ಗೆ ವರವೇ ಸರಿ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts