

ಮೈಸೂರು: ಮೊನ್ನೆಯಷ್ಟೇ ಬಿಡುಗಡೆಯಾದ "ಕೋಲುಮಂಡೆ" ರ್ಯಾಪ್ ಸಾಂಗ್ ವಿವಾದ ಕಿಡಿ ಹೊತ್ತಿಸಿದ ಬೆನ್ನಲ್ಲೇ ಯೂಟ್ಯೂಬ್ನಿಂದ ನಾಪತ್ತೆಯಾಗಿದೆ.
ಇದೇ ತಿಂಗಳ 22 ರಂದು ಯೂಟ್ಯೂಬ್ನಲ್ಲಿ ಕೋಲುಮಂಡೆ ಎಂಬ ಸಾಂಗ್ ಬಿಡುಗಡೆ ಮಾಡಲಾಗಿತ್ತು. ಹಾಡು ವೈರಲ್ ಆದ ಬೆನ್ನಲ್ಲೇ ಹಾಡಿನ ಬಗ್ಗೆ ಚಾಮರಾಜನಗರದ ಜಾನಪದ ಕಲಾವಿದರು ಕಿಡಿಕಾರಿದ್ದರು.
ಮಾದಪ್ಪನ ಗೀತೆಯಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲತೆ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ಹಾಡನ್ನು ಡಿಲೀಟ್ ಮಾಡಬೇಕೆಂಬ ಒತ್ತಾಯವೂ ಕೇಳಿಬಂತು.
ಇದರ ಬೆನ್ನಲ್ಲೇ ಚಂದನ್ ಸಹ ಕ್ಷಮೆಯಾಚಿಸಿ, ಸ್ಪಷ್ಟನೆಯನ್ನು ನೀಡಿದ್ದರು. ಈ ಸಾಂಗ್ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್ ಮಾಡಿದ್ದೇವೆ ಎಂದು ಹೇಳಿದ್ದರು.
ಆದರೂ ಮಾದಪ್ಪನ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್ನಿಂದ ಸಾಂಗ್ ತೆಗೆದುಹಾಕಲಾಗಿದೆ.