More

    ಕಣ್ಮರೆಯಾಗಿದ್ದ ದಿಮ್ಮಿಗಳು ಪತ್ತೆ

    ಉಪ್ಪಿನಂಗಡಿ: ಸರ್ಕಾರಿ ಶಾಲಾ ವಠಾರದಿಂದ ಕಣ್ಮರೆಯಾಗಿದ್ದ ಹತ್ತಕ್ಕೂ ಮಿಕ್ಕಿದ ಮರಗಳ ದಿಮ್ಮಿಗಳು ಇಲಾಖಾ ತನಿಖೆ ಬಿರುಸುಗೊಂಡಾಕ್ಷಣ ಶಾಲಾ ಆವರಣದಲ್ಲೇ ಪತ್ತೆಯಾದ ವಿಸ್ಮಯಕಾರಿ ಘಟನೆ ವರದಿಯಾಗಿದೆ.ಇಲಾಖೆ ಈ ದಿಮ್ಮಿಗಳನ್ನು ಮಣ್ಣಗುಂಡಿ ಡಿಪೋಕ್ಕೆ ರವಾನಿದೆ.

    ಕೆಲ ದಿನಗಳ ಹಿಂದೆ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಿಂದ ಹತ್ತಕ್ಕೂ ಮಿಕ್ಕಿದ ಮರಗಳು ಕಳವಾದ ವಿಚಾರ ಪುತ್ತೂರು ಸಹಾಯಕ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗೆ ನಿರ್ದೇಶನ ನೀಡಿದ್ದರು. ಉಪ್ಪಿನಂಗಡಿ ವಲಯ ಉಪ ಅರಣ್ಯಾಧಿಕಾರಿ ಶಾಲೆಗೆ ಭೇಟಿ ನೀಡಿ ಮಹಜರು ನಡೆಸಿದ ಬಳಿಕ ವಲಯ ಅರಣ್ಯಾಧಿಕಾರಿ ಕಚೇರಿಗೆ ಬರುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದರು.

    ವಲಯ ಅರಣ್ಯಾಧಿಕಾರಿಗಳ ತನಿಖೆ ಬಿರುಸು ಪಡೆಯುತ್ತಿದ್ದಂತೆಯೇ ದಿಮ್ಮಿಗಳಾಗಿ ಪರಿವರ್ತನೆಗೊಂಡಿದ್ದ ಮರಗಳು ಶಾಲಾ ಆವರಣದಲ್ಲಿ ಪ್ರತ್ಯಕ್ಷಗೊಂಡಿವೆ. ಪತ್ತೆಯಾದ ಎಲ್ಲ ದಿಮ್ಮಿಗಳನ್ನು ಇಲಾಖಾ ಕ್ರಮದಂತೆ ಸ್ವಾಧೀನ ಪಡಿಸಿಕೊಂಡು ಕೌಕ್ರಾಡಿ ಗ್ರಾಮದಲ್ಲಿರುವ ಇಲಾಖೆಯ ಮಣ್ಣಗುಮ್ಡಿ ಡಿಪ್ಪೋಗೆ ರವಾನಿಸಲಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳಾದ ಜಯಪ್ರಕಾಶ್, ಮರ ಕಳವಿಗೀಡಾದ ಬಗ್ಗೆ ಮಾಹಿತಿ ಬಂದಾಕ್ಷಣ ತನಿಖೆ ನಡೆಸಿದರು. ತನಿಖೆ ವೇಳೆ ಸ್ಥಳೀಯರೊಬ್ಬರು ಅವರ ಮನೆ ಕಾರ್ಯಕ್ರಮದ ಅಂಗವಾಗಿ ವಿಶಾಲ ಸ್ಥಳಾವಕಾಶ ಪಡೆಯಲು ಅಲ್ಲಿದ್ದ ಮರ ಕಡಿದಿರುವುದಾಗಿ ಒಪ್ಪಿಕೊಂಡಿದ್ದು, ಮರ ಸ್ವಂತಕ್ಕೆ ಬಳಸದೆ ಅಲ್ಲಿಯೇ ಸಮೀಪದಲ್ಲಿ ದಾಸ್ತಾನು ಇರಿಸಲಾಗಿದೆ ಎಂದು ತಿಳಿಸಿದ ಕಾರಣಕ್ಕೆ ಪತ್ತೆಯಾದ ಎಲ್ಲ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿರುವೆವು ಎಂದು ಜಯಪ್ರಕಾಶ್ ತಿಳಿಸಿದ್ದಾರೆ.

    ಜಾಗೃತ ಕಣ್ಣು ಕಳ್ಳತನ ಅನಾವರಣಗೊಳಿಸಿತು

    ಕರಾಯ ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆಸಲಾದ ಸುಮಾರು 80ಕ್ಕೂ ಮಿಕ್ಕಿದ ಮರಗಳ ತೆರವಿಗೆ ಇಲಾಖಾ ಕ್ರಮದಂತೆ ಸಂಖ್ಯೆಯನ್ನು ಮುದ್ರಿಸಲಾಗಿತ್ತು. ಈ ಮಧ್ಯೆ ಪ್ರಭಾವಿ ವ್ಯಕ್ತಿಗಳು ರಾಜಕೀಯ ಕೃಪಾಕಟಾಕ್ಷದಿಂದ ಪಾರಾಗಬಹುದು ಎಂದು ಅಂದಾಜಿಸಿ ಹತ್ತಕ್ಕೂ ಮಿಕ್ಕಿದ ಬೆಲೆ ಬಾಳುವ ಮರಗಳನ್ನು ಕತ್ತರಿಸಿ ಕೊಂಡೊಯ್ದಿದ್ದರು. ಈ ಕೃತ್ಯವನ್ನು ಸಮೀಪದಿಂದ ಗಮನಿಸಿದ ಕಣ್ಣೊಂದು ಕೃತ್ಯದ ಬಗ್ಗೆ ಉಪ್ಪಿನಂಗಡಿ ಅಧಿಕಾರಿಗಳ ಬದಲಾಗಿ ಪುತ್ತೂರಿನ ಅಧಿಕಾರಿಗಳಿಗೆ ಮಾಹಿತಿ ರವಾನಿಸಿತ್ತು.ಈ ಮಾಹಿತಿಯ ಸತ್ಯಾಸತ್ಯತೆ ದೃಢಪಡಿಸಲು ಪುತ್ತೂರಿನ ಅಧಿಕಾರಿಗಳು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ ಬಳಿಕ ಮೊದಲು ಕಣ್ಮರೆಯಾಗಿದ್ದ ಮರಗಳು ಬಳಿಕ ಶಾಲಾ ಆವರಣದಲ್ಲಿ ಪತ್ತೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts