More

    ಅಂಬೇಡ್ಕರ್ ಭಾವಚಿತ್ರ ಬಳಸಿ ಬಿಜೆಪಿಯಿಂದ ಆತ್ಮದ್ರೋಹ

    ರಾಯಚೂರು: ಬಿಜೆಪಿ ಸಂವಿಧಾನವೇ ತಮ್ಮ ಧರ್ಮಗ್ರಂಥ ಎನ್ನುವ ಜಾಹೀರಾತು ನೀಡಿದ್ದು, ಅದರಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಆತ್ಮದ್ರೋಹ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಡಾ.ಸಿ.ಎಚ್.ದ್ವಾರಕನಾಥ್ ಹೇಳಿದರು.
    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಸಂವಿಧಾನ ಬದಲಿಸುವುದಾಗಿ ಹೇಳಿರುವ ಸಂಸದ ಅನಂತಕುಮಾರ ಹೆಗಡೆಯನ್ನು ಪಕ್ಷದಿಂದ ಉಚ್ಛಾಟಿಸದ ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ನೆನಪಾಗಿದೆ ಎಂದರು.
    ಮಧ್ಯಪ್ರದೇಶದ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಜಾ, ಪ್ರಧಾನಿ ಕಚೇರಿಯ ಆರ್ಥಿಕ ಸಲಹೆಗಾರ ಬಿವೇಟ್ ಡೆಲಬರಾಜ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಕೂಡಾ ಸಂವಿಧಾನ ಬದಲಿಸುವುದಾಗಿ ಹೇಳಿದ್ದರು. ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಇಂದಿಗೂ ನಿರಾಕರಿಸಿಲ್ಲ.
    ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳುವಾಗ ಆರ್ಥಿಕ ಹಿಂದುಳಿಕೆ ಆಧಾರದ ಮೇಲೆ ಶೇ.10ರಷ್ಟು ಮೀಸಲಾತಿ ನೀಡಿ ಮೀಸಲಾತಿಯ ಮೂಲ ಆಶಯಕ್ಕೆ ಬಿಜೆಪಿ ಧಕ್ಕೆ ತಂದಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಕೆ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡಲಾಗಿದೆಯೇ ಹೊರತು ಧರ್ಮದ ಆಧಾರದ ಮೇಲೆ ಅಲ್ಲ.
    ಸಂವಿಧಾನ ತಿದ್ದುಪಡಿ ಮಾಡುವ ಅಜೆಂಡಾವನ್ನು ಬಿಜೆಪಿ ಹೊಂದಿದೆ. ಶೋಷಿತರು, ದಲಿತರ ವಿರೋಯಾಗಿರುವ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸಲು ಜನರು ಮುಂದಾಗಿದ್ದಾರೆ ಎಂದು ಡಾ.ಸಿ.ಎಚ್.ದ್ವಾರಕಾನಾಥ್ ತಿಳಿಸಿದರು.
    ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಂಗಮುನಿದಾಸ, ಹುಸೇನಪ್ಪ ವಿಭೂತಿ, ಸಿಂಹಾದ್ರಿ, ತಿಮ್ಮಪ್ಪ ಸ್ವಾಮಿ, ರಂಗನಾಥ, ಹುಲಿಗೆಪ್ಪ, ಮಾಣಿಕ್ಯ, ಈರಣ್ಣ, ಯಮನೂರಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts