

ಬೆಂಗಳೂರು: ಇನ್ನೂ ಸಂಬಳವಾಗದೆ ಕಂಗಾಲಾಗಿರುವ ಸಾರಿಗೆ ಸಿಬ್ಬಂದಿಗೆ ಸಚಿವ ಲಕ್ಷ್ಮಣ್ ಸವದಿ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಾನು ಮುಖ್ಯಮಂತ್ರಿ ಬಳಿ ಮಾತನಾಡಿದ್ದೇನೆ. ಇನ್ನು 3-4 ದಿನಗಳಲ್ಲಿ ಸಂಬಳ ಆಗುತ್ತದೆ. ಸರ್ಕಾರದಿಂದ ನೇರವಾರಿ 326 ಕೋಟಿ ರೂಪಾಯಿಯನ್ನು ಪಡೆದು ಸಂಬಳ ನೀಡುತ್ತೇವೆ ಎಂದಿದ್ದಾರೆ.
ಕಳೆದ ನಾಲ್ಕು ದಿನಗಳಿಂದ 3500 ಬಸ್ಗಳಲ್ಲಿ ಒಂದು ಲಕ್ಷ ಜನರನ್ನು ಅವರ ಊರುಗಳಿಗೆ ಕಳಿಸಲಾಗಿದೆ. ಈ ವೇಳೆ ಸಾರಿಗೆ ಸಿಬ್ಬಂದಿ ಭಯಪಡದೆ ಕೆಲಸ ಮಾಡುತ್ತಿದ್ದಾರೆ. ಜೀವದ ಭಯ ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಸಾರಿಗೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.
ಹಾಗೇ ಮಾಧ್ಯಮದವರು ತಪ್ಪು ತಿದ್ದುವ ಕೆಲಸ ಮಾಡುತ್ತಿದ್ದು ಅವರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಕಾರ್ಮಿಕರನ್ನು ಉಚಿತವಾಗಿ ಅವರ ಊರಿಗೆ ಕಳಿಸಲು ನಾಳೆ ಕೊನೇ ದಿನ ಎಂದು ತಿಳಿಸಿದ್ದಾರೆ.