ಫೋಟೋದಲ್ಲಿದ್ದ ಕೂಡ್ಲೇ ಕಳ್ಳನಾಗಲ್ಲ ನಿಜ... ಆದ್ರೆ ಕಳ್ಳನ ಜತೆಗೆ ಸಂಬಂಧ ಇಟ್ಕೊಂಡ್ರೆ _ _ ಆಗ್ತದೆ- ಸಚಿವ ಸಿ.ಟಿ.ರವಿ

Zameer ahamed Fasil siddaramaiah
Published on

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಸಂಶಯದ ಸುಳಿಯಲ್ಲಿ ಮುಳುಗುವ ಮುನ್ನ ವಾಸ್ತವಾಂಶ ಏನೆಂಬುದು ಸ್ಪಷ್ಟಪಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವವರು ಕೊಲಂಬೊಗೆ ಹೋಗುವುದು, ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ, ಕೊಲಂಬೊಗೆ ಹೋಗಿದ್ದರ ಕಾರಣವೇನು ಎಂಬುದು ಪಾಸ್ ಪೋರ್ಟ್ ತೋರಿಸಲಿ. ಕ್ಯಾಸಿನೋ ಹೂಡಿಕೆ ಮಾಡಿದ್ದರೆ, ಲೋಕಾಯುಕ್ತ ಹಾಗೂ ಚುನಾವಣೆ ಆಯೋಗಕ್ಕೆ ಸಲ್ಲಿಸಿದ‌ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆಯೆ ? ಗೊತ್ತಿಲ್ಲ.

ಕಳ್ಳನ ಜತೆಗೆ ಸಂಬಂಧ ....: ಕಳ್ಳನ ಜತೆಗೆ ಫೋಟೋ ತೆಗೆಯಿಸಿಕೊಂಡ ತಕ್ಷಣ ಕಳ್ಳನಾಗುವುದಿಲ್ಲ ನಿಜ. ಆದರೆ, ಕಳ್ಳನ ಜತೆ ಸಂಬಂಧ ಇಟ್ಟುಕೊಳ್ಳುವುದು ಡ್ಯಾಶ್ ಡ್ಯಾಶ್ ಆಗುತ್ತದೆ. ಫಾಝಿಲ್ ಅಹ್ಮದ್ ಜತೆಗಿರುವ ಫೋಟೋದಲ್ಲಿ ಸಿದ್ದರಾಮಯ್ಯ, ಜಮೀರ್ ಜತೆಗೆ ಪುಟ್ಟ ಮಗವಿದೆ ( ತಮ್ಮ ಮೊಬೈಲ್ ನಲ್ಲಿರುವ ಫೋಟೋ ತೋರಿಸಿ) ಫೋಟೋದಲ್ಲಿ ಇರುವವರ ಮುಖಭಾವ ಗಮನಿಸಿದರೆ, ಬಹಳ ಹಳೆಯ ಸಂಬಂಧ ಹಾಗೂ ಆತ್ಮೀಯತೆ ಇದೆ ಎನ್ನುವುದು ವೇದ್ಯವಾಗುತ್ತದೆ.

ಡ್ರಗ್ಸ್ ಪೆಡ್ಲರ್ ಜತೆಗೆ ಜಮೀರ್ ನಂಟಿದೆ, ಈ ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸುವುದಿಲ್ಲ. ತನಿಖೆ ನಡೆಸುತ್ತಿರುವ ತಂಡ ಸಂಗ್ರಹಿಸಿದ ಮಾಹಿತಿ ಆಧರಿಸಿ ಕ್ರಮಕೈಗೊಳ್ಳುತ್ತದೆ ಎಂದು ಸಿ.ಟಿ.ರವಿ‌ ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net