More

    ಯೋಗೀಶ್ ಗೌಡ ಕೊಲೆ ಕೇಸ್​; ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್ ಶುರುವಾಗಿದೆ.

    ಯೋಗೀಶ್ ಗೌಡ ಕೊಲೆ ಕೇಸ್​ನಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ತನಿಖೆ ವೇಳೆ ವಿಜಯ್ ಕುಲಕರ್ಣಿ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್​ ಜಾರಿಮಾಡಿತ್ತು. ಅದರಂತೆ ಗಂಗಾನಗರದ ಸಿಬಿಐ ಕಚೇರಿಗೆ ಆಗಮಿಸಿದ ವಿಜಯ್​ ಕುಲಕರ್ಣಿಯನ್ನು ಸಿಬಿಐ ಎಸ್​ಪಿ ಥಾಮ್ಸನ್ ಜೋಸ್ ನೇತೃತ್ವದ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ.

    ಇದನ್ನೂ ಓದಿರಿ ಯೋಗೀಶ್ ಗೌಡ ಕೊಲೆ ಪ್ರಕರಣ: ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ವಿಚಾರಣೆ

    2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ್ ಜಿಮ್ ಬಳಿ ಯೋಗೀಶ್​ ಗೌಡರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ‌ ಕೊಲೆ

    ಯೋಗೀಶ್ ಗೌಡ ಕೊಲೆ ಕೇಸ್​; ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್
    ವಿಜಯ್ ಕುಲಕರ್ಣಿ

    ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ‌ 2019ರಲ್ಲಿ ಈ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು. 6 ಆರೋಪಿಗಳ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿತ್ತು. ಸಿಬಿಐ ತನಿಖೆ ಪ್ರಶ್ನಿಸಿ ಬಸವರಾಜ ಮುತ್ತಗಿ ಕೋರ್ಟ್ ಮೊರೆ ಹೋಗಿದ್ದರು. ಆಗ, ಸಿಬಿಐ ತನಿಖೆಗೆ ಧಾರವಾಡ ಹೈಕೋರ್ಟ್‌ ವಿಭಾಗೀಯ ಪೀಠ ತಡೆ ನೀಡಿತ್ತು. ಈ ಆದೇಶದ ವಿರುದ್ಧ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದರು. ಬಳಿಕ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್‌, ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.‌ ತದನಂತರ ಸಿಬಿಐ ಟೀಂ ಬೆಂಗಳೂರು ಮತ್ತು ತಮಿಳುನಾಡು ಮೂಲದ ಅಶ್ವತ್ಥ್‌, ಪುರುಷೋತ್ತಮ ಸೇರಿ ಐವರು ಆರೋಪಿಗಳನ್ನು ಬಂಧಿಸಿತ್ತು. ಬಸವರಾಜ್‌ ಮುತ್ತಗಿ ಕಡೆಯಿಂದ ಯೋಗೀಶ್‌ಗೌಡ ಕೊಲೆಗೆ ಸುಫಾರಿ ಪಡೆದಿರುವ ಆರೋಪವಿದೆ.

    ಇದೇ ಕೇಸ್​ನಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಮಾಜಿ ಪೊಲೀಸ್ ಕಮಿಷನರ್ ಪಾಂಡುರಂಗ ಎಚ್‌. ರಾಣೆಗೆ ಸಿಬಿಐ ನೋಟಿಸ್ ನೀಡಿತ್ತು. ಬಳಿಕ ಪಾಂಡುರಂಗ ರಾಣೆ ಅವರು ಬೆಂಗಳೂರಿನ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಈ ವೇಳೆ ಯೋಗೀಶ್ ಗೌಡ ಕೊಲೆ ಪ್ರಕರಣ ಕುರಿತು ಆಗ ಏನೆಲ್ಲ ಕ್ರಮ ಕೈಗೊಳ್ಳಲಾಗಿತ್ತು? ಘಟನೆ ಸಂಬಂಧ ಯಾವೆಲ್ಲ ಸಾಕ್ಷ್ಯಧಾರ ಪತ್ತೆಯಾಗಿತ್ತು?.. ಹೀಗೆ ಹಲವಾರು ಆಯಾಮದಲ್ಲಿ ವಿಚಾರಣೆ ನಡೆದಿತ್ತು. ಇದೀಗ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿಯ ವಿಚಾರಣೆ ನಡೆಯುತ್ತಿದೆ.

    ಒಂದೇ ಕಡೆ ಇದ್ದರೂ ನನ್ನ ಹೆಂಡ್ತಿ-ಮಗನ ಮುಖ ನೋಡೋಕೆ ಆಗ್ಲಿಲ್ಲ… ಎಂದು ನೊಂದುಕೊಂಡ ಸಿದ್ದರಾಮಯ್ಯ

    ರಾಹುಲ್​ ಒಳ್ಳೆಯ ಸ್ನೇಹಿತ ಅಂದ್ರು ನಿರ್ಮಾಪಕ ಕೆ.ಮಂಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts