ಎನ್‌ಐಟಿಕೆ ಸುರತ್ಕಲ್‌ನಲ್ಲಿ ಗಣಿ ತರಬೇತಿ ಕಾರ್ಯಕ್ರಮ

(ಎನ್‌ಐಟಿಕೆ) ಸುರತ್ಕಲ್‌ನ ಗಣಿ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗಣಿಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್-2020 ಕುರಿತು ಆರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಸೋಮವಾರ ಚಾಲನೆ ದೊರಕಿತು.
(ಎನ್‌ಐಟಿಕೆ) ಸುರತ್ಕಲ್‌ನ ಗಣಿ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗಣಿಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್-2020 ಕುರಿತು ಆರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಸೋಮವಾರ ಚಾಲನೆ ದೊರಕಿತು.
Published on
ಮಂಗಳೂರು: ಪ್ರತಿಷ್ಠಿತ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್‌ನ ಗಣಿ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗಣಿಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆ ಹಾಗೂ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್-2020 ಕುರಿತು ಆರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮ ಸೋಮವಾರ ಚಾಲನೆ ದೊರಕಿತು.
ಜೂ.8 ರಿಂದ 13 ರವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಐಟಿಕೆ ಉಪ ನಿರ್ದೇಶಕ ಪ್ರೊ. ಸುಭಾಷ್ ಸಿ. ಯಾರಗಲ್ ವಹಿಸಿದ್ದರು. ಗಣಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಹರ್ಷ ವರ್ಧನ್, ವಿವಿಧ ವಿಭಾಗಗಳ ಡೀನ್‌ಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ಭಾರತ ಸರ್ಕಾರದ ನೂತನ ಒಎಸ್‌ಎಚ್‌ಡಬ್ಲ್ಯೂಸಿ ಕೋಡ್-2020 ನಿಯಮಾವಳಿಗಳು, ಡಿಜಿಎಂಎಸ್ ಚೌಕಟ್ಟಿನ ಆಧಾರಿತ ಸುರಕ್ಷತಾ ನಿರ್ವಹಣೆ, ಅಪಘಾತಗಳ ವಿಶ್ಲೇಷಣೆ, ಶಬ್ದ ಮತ್ತು ಕಂಪನ ನಿಯಂತ್ರಣ ಹಾಗೂ ಗಣಿ ಸುರಕ್ಷತಾ ಇಂಜಿನಿಯರಿಂಗ್ ಪರಿಕಲ್ಪನೆಗಳ ಬಗ್ಗೆ ಎನ್‌ಐಟಿಕೆ ತಜ್ಞರು ಮಾಹಿತಿ ನೀಡಲಿದ್ದಾರೆ. ತರಗತಿಗಳ ಜೊತೆಗೆ ಅಭ್ಯರ್ಥಿಗಳು ಎನ್‌ಐಟಿಕೆಯ ಮಾದರಿ ಗಣಿ, ಕೆಐಒಸಿಎಲ್ ಪೆಲೆಟ್ ಪ್ಲಾಂಟ್ ಮತ್ತು ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಕ್ಷೇತ್ರ ಭೇಟಿ ನೀಡಲಿದ್ದಾರೆ. ದೇಶದ ಪ್ರಮುಖ ಗಣಿಗಾರಿಕೆ ಸಂಸ್ಥೆಗಳಾದ ಕೋಲ್ ಇಂಡಿಯಾ ಲಿಮಿಟೆಡ್, ಎಸ್‌ಸಿಸಿಎಲ್, ಎಂಸಿಎಲ್, ಸಿಸಿಎಲ್, ಡಬ್ಲ್ಯೂಸಿಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಫೊಮೆಂಟೊ ರಿಸೋರ್ಸಸ್, ಕೆಎಸ್‌ಎಮ್‌ಸಿಎಲ್, ಎನ್‌ಎಂಡಿಸಿ, ವೇದಾಂತ ಲಿಮಿಟೆಡ್ ಸೇರಿದಂತೆ ವಿವಿಧ ಸಂಸ್ಥೆಗಳ 31 ಹಿರಿಯ ಅಧಿಕಾರಿಗಳು ಮತ್ತು ವೃತ್ತಿಪರರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net