ಮಿಗ್​-29 ಫೈಟರ್​ ಜೆಟ್​ ವಿಮಾನ ದಿಢೀರ್​ ಪತನ! ಹೀಗಿದೆ ಕಾರಣ| MIG-29

MiG-29
Published on

ನವದೆಹಲಿ: ಮಿಗ್​-29(MIG-29) ಫೈಟರ್​ ಜೆಟ್​ ವಿಮಾನ ಹಾರಡುವ ಸಂದಂರ್ಭದಲ್ಲಿ ತಾಂತ್ರಿಕ ದೋಷದಿಂದ ಉತ್ತರ ಪ್ರದೇಶದ ಆಗ್ರಾದ ಬಳಿ ಇಂದು (ನ.04) ಪತನಗೊಂಡಿದೆ.

ವಿಮಾನವು ಪಂಜಾಬ್​ನ ಆದಂಪುರದಿಂದ ಟೇಕಾಫ್ ಆಗಿದ್ದು, ತರಬೇತಿ ವ್ಯಾಯಾಮಕ್ಕಾಗಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಇನ್ನು ಪೈಲಟ್​ ತಾನು ಸುರಕ್ಷಿತವಾಗಿ ಹೊರಬಂದಿದ್ದಾನೆ ಎಂದು ಭಾರತೀಯ ವಾಯುಪಡೆ ಮತ್ತು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಮಿಗ್​-29 ಫೈಟರ್​ ಜೆಟ್​ ವಿಮಾನವು ಎಂದಿನಂತೆ ತರಬೇತಿ ಆರಂಭಿಸಿದೆ. ಆಗ್ರಾದ ಬಳಿ ಇದ್ದಕ್ಕಿಂದಂತೆ ತಾಂತ್ರಿಕ ದೋಷ ಎದುರಾಗಿದೆ. ಕೂಡಲೇ ಎಚ್ಚೆತ್ತ ಪೈಲಟ್,​ ವಿಮಾನವನ್ನು ನಿಯಂತ್ರಣಕ್ಕೆ ತಗೆದುಕೊಂಡು, ಯಾರು ಇಲ್ಲದ ಸ್ಥಳದಲ್ಲಿ ಕೆಳಗಿಳಿಸಲು ಯತ್ನಿಸಿದ್ದಾನೆ. ಕೊನೆಗೂ ವಿಮಾನ ಹತೋಟಿಗೆ ಬಾರದಿದ್ದಾಗ, ಪ್ಯಾರಚೂಟ್​ ಮೂಲಕ ಹೊರಬಂದಿದ್ದಾನೆ. ಹೀಗಾಗಿ, ಪೈಲಟ್​ನ ಜಾಗೂರಕತೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ಜೆಟ್​ ಪತನವಾಗುವ ದೃಶ್ಯಗಳು ವೈರಲ್​ ಆಗಿದ್ದು, ಅಪಘಾತ ಕಾರಣ ಕಂಡುಹಿಡಿಯಲು ಭಾರತೀಯ ನೌಕಪಡೆಗೆ ಆದೇಶಿಸಲಾಗಿದೆ. ಸದ್ಯಕ್ಕೆ ವಿಮಾನ ಪತನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಇದರ ಜತೆಗೆ ಅಪಘಾತದ ಕುರಿತು ನ್ಯಾಯಾಲಯ ತನಿಖೆಗೆ ಆದೇಶ ಕೂಡ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಿಗ್-29 ಯುದ್ಧ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿರುವುದು ಇದೇ ಮೊದಲಲ್ಲ. ಹೌದು, 2024ರ ಸೆ.02ರಂದು ರಾಜಸ್ಥಾನದ ಬರ‍್ಮರ್‌ನಲ್ಲಿ ಮಿಗ್-29 ಯುದ್ಧ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ಅಪಘಾತದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net