BBKS10: 'ಟಾಪ್​ ಫೈನಲಿಸ್ಟ್​ಗಳ ಪೈಕಿ ಇವರೇ ಗೆಲ್ಲಬಹುದು'; ಮೈಕಲ್​ ಸೂಚಿಸಿದ ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!

ವಿಜಯವಾಣಿ - 2024-01-08T105020.494 (1)
Published on

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಪ್ರಾರಂಭದ ದಿನ ಈ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಹಲವರ ಹುಬ್ಬುಗಳು ಮೇಲೇರಿದ್ದವು. ಯಾರಿದು ಮೈಕಲ್ ಅಜಯ್? ಎಂಬ ಪ್ರಶ್ನೆ ವೀಕ್ಷಕರ ಮನಸಲ್ಲಿ ಕಾಡಿತ್ತು. ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ ವಿದೇಶದ ಪ್ರಜೆಯಾಗಿರುವ, ಕನ್ನಡದ ನೆಲದಲ್ಲಿ ಮೂಲಬೇರುಗಳ ಸಂಬಂಧ ಹೊಂದಿರುವ ಮೈಕಲ್‌, ಬಿಗ್‌ಬಾಸ್‌ ಮನೆಯೊಳಗೆ ಬಂದ ಮೇಲೆಯೂ ಅವರ ಬಗ್ಗೆ ಕುತೂಹಲ ತೋರಿದವರು ಕಡಿಮೆಯೇ. ಆದ್ರೆ, ಇಂದು ಬಿಗ್ ಮನೆಯಿಂದ ಹೊರಬರುವಾಗ ಎಲ್ಲರ ಪ್ರೀತಿ ಗಳಿಸಿ, ಮಣ್ಣಿನ ಮಗ ಎಂಬ ಬಿರುದನ್ನು ಗಳಿಸಿರುವುದು ಇದೀಗ ವೀಕ್ಷಕರಲ್ಲಿ ಭಾರೀ ಸಂತಸ ಮೂಡಿಸಿದೆ.

ಕಳೆದ 'ಸೂಪರ್ ಸಂಡೇ ವಿತ್ ಸುದೀಪ' ಸಂಚಿಕೆಯಲ್ಲಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಮೈಕಲ್, ಮನೆಯೊಳಗಿನ ಹಲವು ಕುತೂಹಲಕಾರಿ ಸಂಗತಿಗಳು, ಹೇಳದೆ ಉಳಿಸಿಕೊಂಡಿದ್ದ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಮಧ್ಯೆ ಸೀಸನ್​ 10ರ ಫಿನಾಲೆ ಹಂತ ತಲುಪುವ ಐವರು ಫೈನಲಿಸ್ಟ್​ ಯಾರು? ಮತ್ತು ವಿಜೇತರು ಯಾರಾಗಬಹುದು ಎಂಬ ಪ್ರಶ್ನೆಗೆ ಮೈಕಲ್ ಕೊಟ್ಟ ಉತ್ತರ ಹೀಗಿದೆ ನೋಡಿ.

"ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಎಲ್ಲೋ ಒಂದು ಕಡೆ, ಇನ್ನೊಂದೆರೆಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್" ಎಂದ ಮೈಕಲ್. "ಆರಂಭದಲ್ಲಿಯೇ ಗಟ್ಟಿಯಾಗಿರಬೇಕಿತ್ತು, ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ, ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ" ಎಂದಿದ್ದಾರೆ.

"ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್, ತುಕಾಲಿ ಸಂತೋಷ್ ಮತ್ತು ಪ್ರತಾಪ್ ಫೈನಲ್ ಹಂತದಲ್ಲಿರುತ್ತಾರೆ. ಸಂಗೀತಾ ಗೆಲ್ಲಬಹುದು ಅಂತ ನನಗನಿಸುತ್ತದೆ. ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅವಳ ಗೇಮ್ ಕೂಡ ತುಂಬ ಸ್ಲೋ ಆಗಿ ಹೋಗುತ್ತಿದೆ" ಎಂದು ಮೈಕಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net