ನಾಪತ್ತೆಯಾಗಿದ್ದವರನ್ನು ಹುಡುಕಲು ಹೋಗಿದ್ದ ಪೊಲೀಸರಿಗೆ ಸಿಕ್ಕಿದ್ದು 45 ಮನುಷ್ಯ ಮೃತದೇಹದ ಚೀಲಗಳು..!

mexico
Published on

ಜಲಿಸ್ಕೋ: ನಾಪತ್ತೆಯಾಗಿದ್ದವರನ್ನು ಹುಡುಕಲು ಹೋಗಿದ್ದ ಪೊಲೀಸರಿಗೆ ಮನುಷ್ಯರ ಮೃತದೇಹವಿರುವ 45 ಚೀಲಗಳು ದೊರಕಿರುವ ಘಟನೆ ಮೆಕ್ಸಿಕೋದ ಜಲಿಸ್ಕೋ ಎಂಬಲ್ಲಿ ನಡೆದಿದೆ.

ಸ್ಥಳೀಯ ಕಾಲ್​ಸೆಂಟರ್​ನಲ್ಲಿ ಉದ್ಯೋಗ ಮಾಡುತ್ತಿದ್ದ 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು ಮೇ 20ರಿಂದ 22ರ ನಡುವೆ ನಾಪತ್ತೆಯಾಗಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ವೇಳೆ ಪೊಲೀಸರಿಗೆ ಜಲಿಸ್ಕೋದ ಕಂದಕದಲ್ಲಿ 45 ಚೀಲಗಳು ದೊರಕಿವೆ. ಅನುಮಾನಗೊಂಡ ಪೊಲೀಸರ ಈ ಬ್ಯಾಗ್​ಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಪುರುಷ ಹಾಗೂ ಮಹಿಳೆಯರ ಶವಗಳು ದೊರೆತಿವೆ.

ನಾಪತ್ತೆಯಾಗಿದ್ದ 7 ಜನರು ಕಾಲ್​ ಸೆಂಟರ್​ ಉದ್ಯೋಗಿಯಾಗಿದ್ದು, ಬ್ಯಾಗ್ ದೊರೆತಿರುವ ಪ್ರದೇಶದಲ್ಲಿಯೇ ಕಾಲ್​ಸೆಂಟರ್​ ಕೂಡ ಪತ್ತೆಯಾಗಿದೆ. ಕಾಣೆಯಾದವರು ಹಾಗೂ ದೊರೆತಿರುವ ಶವಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಹೊಂದಾಣಿಕೆ ಕಂಡು ಬಂದಿದೆ.

ಕಾಲ್​ ಸೆಂಟರ್​ನ ಸಿಬ್ಬಂದಿಗಳು​ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಿರಬಹುದು. ಈ ವೇಳೆ ಮನಸ್ತಾಪ ಉಂಟಾಗಿ ಏನೋ ಅವಗಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net