50 ಮೀಟರ್​ ಆಳವಾದ ಪ್ರಪಾತಕ್ಕೆ ಬಿದ್ದ ಬಸ್​: ಕನಿಷ್ಠ 17 ಪ್ರಯಾಣಿಕರ ಸಾವು

mexico bus
Published on

ಟಿಜುವಾನಾ: ಪ್ರಯಾಣಿಕರ ಬಸ್‌ನೊಂದು ಸುಮಾರು 50 ಮೀಟರ್​ ಆಳವಾದ ಪ್ರಪಾತಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸಿರವು ಘಟನೆ ಪಶ್ಚಿಮ ಮೆಕ್ಸಿಕೋದಲ್ಲಿ ನಡೆದಿದೆ.

ಇದನ್ನೂ ಓದಿ: 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆ: ಮುಂದೆ ನಡೆದದ್ದು ಮಾತ್ರ ದುರಂತ..

ಘಟನೆ ವೇಳೆ ಬಸ್​ನಲ್ಲಿ ಭಾರತ, ಡೊಮಿನಿಕನ್ ರಿಪಬ್ಲಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ನಾಗರಿಕರು ಸೇರಿದಂತೆ ಸುಮಾರು 42 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಗುರುತು ಪತ್ತೆಗಾಗಿ ತನಿಖೆಯನ್ನು ಆರಂಭಿಸಲಾಗಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಮಂದಿಯ ದುರಂತ ಸಾವು ಸಂಭವಿಸಿದ್ದು, 22 ಮಂದಿ ಗಾಯಗೊಂಡಿದ್ದಾರೆ.

ಗುರುವಾರದಂದು ಎಲೈಟ್ ಪ್ಯಾಸೆಂಜರ್ ಲೈನ್‌ಗೆ ಸೇರಿದ ಬಸ್‌ನೊಂದು ಯುಎಸ್ ಗಡಿಗೆ ಹೋಗುತ್ತಿತ್ತು. ಆದರೆ ರಾಜ್ಯ ರಾಜಧಾನಿ ಟೆಪಿಕ್‌ನ ಹೊರಗೆ ಬರ್ರಾಂಕಾ ಬ್ಲಾಂಕಾ ಬಳಿ ಆಳವಾದ ಕಂದರಕ್ಕೆ ಬಿದ್ದಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಂದರದ ಆಳವು ಸುಮಾರು 50 ಮೀಟರ್ (164 ಅಡಿ) ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆಯು ಸವಾಲಿನ ಕೆಲಸವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್ಸು ರಸ್ತೆ ಬಿಟ್ಟು ಕಂದರಕ್ಕೆ ಧುಮುಕಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದುರದೃಷ್ಟವಶಾತ್, ಮೆಕ್ಸಿಕೋ ಇಂತಹ ವಿನಾಶಕಾರಿ ಬಸ್ ಅಪಘಾತಗಳಿಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ದಕ್ಷಿಣ ರಾಜ್ಯದ ಓಕ್ಸಾಕಾದಲ್ಲಿ ನಡೆದ ಬಸ್ ಅಪಘಾತದಲ್ಲಿ 29 ಮಂದಿ ಪ್ರಾಣ ಕಳೆದುಕೊಂಡಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net