

ಮಾಂಟಿಸೆಲ್ಲೋ: ಎರಡು ಲೀಟರ್ ನೀರು ಕುಡಿದ ನಂತರ ಮಹಿಳೆಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಅಮೇರಿಕಾದ ಮಾಂಟಿಸೆಲ್ಲೋ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಆಶ್ಲೇ ಸಮ್ಮರ್ಸ್ ಎಂದು ಗುರುತಿಸಲಾಗಿದ್ದು, ಅವಳು ತನ್ನ ಪತಿ ಮತ್ತು ಇಬ್ಬರು ಚಿಕ್ಕ ಹೆಣ್ಣುಮಕ್ಕಳೊಂದಿಗೆ ವಾಯುವಿಹಾರಕ್ಕೆಂದು ಸಮೀಪದ ಸರೋವರಕ್ಕೆ ತೆರಳಿದ್ದಳು. ಪ್ರವಾಸದ ಕೊನೆಯ ದಿನದಂದು, ಸಾಕಷ್ಟು ನೀರು ಕುಡಿಯಲು ಸಾಧ್ಯವಾಗಲಿಲ್ಲ ಎಂದು ಭಾವಿಸಿದ್ದ ಆಕೆ 20 ನಿಮಿಷದಲ್ಲಿ ಸುಮಾರು 2 ಲೀಟರ್ ನೀರನ್ನು ಕುಡಿದಿದ್ದಾಳೆ.
ಇದನ್ನೂ ಓದಿ: ಆಟವಾಡುತ್ತಿದ್ದಾಗಲೇ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದ ಮಗು...
ಬಳಿಕ ಆಕೆಗೆ ತಲೆನೋವು, ಸುಸ್ತಿನ ಲಕ್ಷಣಗಳು ಕಂಡು ಬಂದಿದ್ದರಿಂದ ಎಲ್ಲರೂ ಮನೆಗೆ ಹಿಂದಿರುಗಿದ್ದು, ಕಾರಿಂದ ಇಳಿಯುವ ವೇಳೆ ಆಕೆ ಕುಸಿದು ಬಿದ್ದಿದ್ದಾಳೆ.ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಕೆಯನ್ನು ಪರಿಕ್ಷೀಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ, ಅಲ್ಲದೇ, ಆಕೆಯ ಮೆದುಳು ಊದಿಕೊಂಡಿದ್ದು, ನೀರಿನ ವಿಷತ್ವದಿಂದ ಸತ್ತಳು ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ಹೇಳಿದೆ.
ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ದೇಹಕ್ಕೆ ಹಾನಿಯುನ್ನು ಉಂಟು ಮಾಡುವ ಸಾಧ್ಯತೆಯಿದೆ. ನೀರಿನ ವಿಷತ್ವವು ಎಂಬುದು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದರಿಂದ ಉಂಟಾಗುವ ಸ್ಥಿತಿಯಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಇದು ಮಾರಕವಾಗಬಹುದು.(ಏಜೆನ್ಸೀಸ್)