

ಲಕ್ನೋ: ಹೊರರೋಗಿಗಳ ವಿಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು 3ನೇ ಅಂತಸ್ತಿನಿಂದ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಇದನ್ನೂ ಓದಿ: ಚೆಕ್ಪೋಸ್ಟ್ನಲ್ಲಿ 2ರೂ. ಹಣ ವಸೂಲಿ ಆರೋಪ: 37 ವರ್ಷಗಳ ನಂತರ ಆರೋಪಿಗಳ ಖುಲಾಸೆ
ಗೊಂಡಾದ ಪರ್ಸೋನಾ ಗ್ರಾಮದ ನಿವಾಸಿ ಮಾಹಿಸಾಬ(4) ಕಣ್ಣಿನ ಪೊರೆಯಿಂದ ಬಳಲುತ್ತಿದ್ದಳು. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂ) ನೇತ್ರ ಚಿಕಿತ್ಸಾ ವಿಭಾಗದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರವರಿ 13ರಂದು ಬಾಲಕಿಯ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ, ಸಂಬಂಧಿಕರು ಬಾಲಕಿಯನ್ನು ಪರೀಕ್ಷೆಗೆಂದು ಆಸ್ಪತ್ರೆಗೆ ಕರೆತಂದಿದ್ದರು.
ಮೂರನೇ ಮಹಡಿಯ ನೇತ್ರ ವಿಭಾಗದಲ್ಲಿ ಕೊಠಡಿಯಲ್ಲಿ ಬಾಲಕಿಯ ಕಣ್ಣಿಗೆ ಔಷಧ ಹಾಕಿ ಕೂರಿಸಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಮಗು ಕಾಲು ಜಾರಿ ಬಿದ್ದಿದ್ದಾಳೆ. ಈ ವೇಳೆ ಬಾಲಕಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಸಮೀಪದಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ಗಾಯಾಳು ವಿಭಾಗಕ್ಕೆ ದಾಖಲಿಸಿಲಿದ್ದಾರೆ. ಕೂಡಲೇ ಆಕೆಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಬಾಲಕಿಯ ತಲೆಗೆ ಸೇರಿದಂತೆ ಇತರ ಅಂಗಾಂಗಗಳಿಗೂ ಗಾಯಗಳಾಗಿವೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಕೆಜಿಎಂಯು ವಕ್ತಾರ ಡಾ.ಸುಧೀರ್ ಸಿಂಗ್ ತಿಳಿಸಿದ್ದಾರೆ.(ಏಜೆನ್ಸೀಸ್)