

ಮಹಾರಾಷ್ಟ್ರ: ( Mexican Woman Viral Video ) ಭಾರತದ ಬಹುಸಂಸ್ಕೃತಿಯು ಭಾರತೀಯರನ್ನು ಮಾತ್ರವಲ್ಲದೆ ವಿದೇಶಿಯರನ್ನು ಸಹ ಆಕರ್ಷಿಸುತ್ತದೆ. ಮೆಕ್ಸಿಕೋದ ಜಾಕ್ವೆಲಿನ್ ಮೊರೇಲ್ಸ್ ಕ್ರೂಜ್ ಭಾರತೀಯ ಸಂಸ್ಕೃತಿಯ ಪ್ರೇಮಿಗಳಲ್ಲಿ ಒಬ್ಬರು. ಈಕೆ ಭಾರತವನ್ನು ಹಾಡಿ ಹೊಗಳಿದ್ದಾಳೆ.
ಮೆಕ್ಸಿಕನ್ ಯುವತಿ ಪ್ರಸ್ತುತ ಮಹಾರಾಷ್ಟ್ರದ ನಾಗ್ಪುರದಲ್ಲಿ ನೆಲೆಸಿದ್ದಾಳೆ. ಈ ಮೆಕ್ಸಿಕನ್ ಹುಡುಗಿ ನಮ್ಮ ದೇಶವನ್ನು ಪ್ರೀತಿಸುತ್ತಾಳೆ. ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ಇತ್ತೀಚೆಗಿನ ವಿಡಿಯೋವೊಂದರಲ್ಲಿ ತಾನು ಭಾರತದಲ್ಲಿ ಎಷ್ಟು ಸೇಫ್ ಎಂದು ಹೇಳಿದ್ದಾಳೆ.
ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡ ಜಾಕ್ವೆಲಿನ್, "ಭಾರತವನ್ನು ನನ್ನ ಮನೆ ಎಂದು ಕರೆಯಲು ನನಗೆ ತುಂಬಾ ಸಂತೋಷವಾಗಿದೆ. ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ವಿದೇಶಿಗರು ಅನೇಕ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ತನಗೆ ಭಾರತದಲ್ಲಿ ಒಳ್ಳೆಯ ಅನುಭವವಿದೆ, ಇಲ್ಲಿನ ಸಂಸ್ಕೃತಿ, ಜನರು ಮತ್ತು ಪರಿಸರ ಸುರಕ್ಷಿತವಾಗಿದೆ ಎಂದು ಅವರು ಹೇಳಿದರು.
ಈ ದೇಶದಲ್ಲಿ ಸಾಂಪ್ರದಾಯಿಕ ಭಾರತೀಯ ಬಟ್ಟೆ ಅಥವಾ ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಭಾರತ ಸುಂದರವಾದ ದೇಶ ಎಂದು ಹೇಳಿದ್ದಾರೆ. ಆದರೆ, ಯುವತಿಯ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಅವರ ಮಾತನ್ನು ಬೆಂಬಲಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತದ ಬಗ್ಗೆ ಜಾಕ್ವೆಲಿನ್ ಹೇಳಿದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿದೇಶಿಯರಿಂದ ಇದನ್ನೆಲ್ಲ ಕೇಳುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಭಾರತೀಯ ಮಹಿಳೆಯಾಗಿ ನಾನು ಸುರಕ್ಷಿತವಾಗಿಲ್ಲ. ರಾತ್ರಿಯಲ್ಲಿ ಒಬ್ಬಂಟಿಯಾಗಿ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಕೆಲವು ಪ್ರಕರಣಗಳ ಕುರಿತಾಗಿ ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ವಿದೇಶಿಯರಿಂದ ಭಾರತದ ಕುರಿತಾಗಿ ಮೆಚ್ಚಿಗೆ ಮಾತು ಕೇಳುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ.