Banana Auction: 52 ಕೋಟಿ ರೂ. ಕೊಟ್ಟು ಖರೀದಿಸಿದ್ದ ಬಾಳೆಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿದ!

Banana Auction
Published on

Banana Auction : ಬಾಳೆಹಣ್ಣಿನ ಬೆಲೆ ಎಷ್ಟು.. 5 ರೂಪಾಯಿ, 6 ರೂಪಾಯಿ ಹೆಚ್ಚು ಅಂದ್ರೆ 10 ರೂಪಾಯಿ ಆಗಿದೆ. ಆದರೆ  ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿರುವ ಬಾಳೆಹಣ್ಣು ಕೋಟಿ ಬೆಲೆ ಬಾಳುತ್ತಿದೆ ಎನ್ನಲಾಗಿತ್ತು. ಹೀಗೆ ಕೋಟಿ ಕೋಟಿ ರೂಪಾಯಿ ಹಣವನ್ನ ಕೊಟ್ಟು ಖರೀದಿ ಮಾಡಿದ್ದ ಬಾಳಹಣ್ಣನ್ನು ವ್ಯಕ್ತಿಯೊಬ್ಬ ಕ್ಷಣ ಮಾತ್ರದಲ್ಲಿ ತಿಂದು ಮುಗಿಸಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣೊಂದು ಬರೋಬ್ಬರೀ 52 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿ ಭಾರಿ ಸದ್ದು ಮಾಡಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಸುಮಾರು 6.2 ಮಿಲಿಯನ್​ ಡಾಲರ್ ಅಂದರೆ ಭಾರತದ ಕರೆನ್ಸಿ ಪ್ರಕಾರ 52,45,89,440 ಕೋಟಿ ಕೊಟ್ಟು ಖರೀದಿಸಿದ್ದರು.

ಇದೀಗ ಜಸ್ಟಿನ್ ಈ ಬಾಳೆ ಹಣ್ಣನ್ನು ಒಂದೇ ಕ್ಷಣದಲ್ಲಿ ತಿಂದು ಮುಗಿಸಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಒಂದು ಬಾಳೆ ಹಣ್ಣಿಗೆ 52 ಕೋಟಿ ರೂ. ಕೊಟ್ಟು ಖರೀದಿಸುವ ಅವಶ್ಯಕತೆ ಏನಿದೆ ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ಕಲಾವಿದರ ಹೆಸರು ಕೇಳಿದಾಕ್ಷಣ ಅವರ ಕಲಾಕೃತಿಗಳು ಕಂಡಿಯರದ ರೀತಿಯಲ್ಲಿ ಹಜಾರಿನಲ್ಲಿ ಮಾರಾಟವಾಗುತ್ತದೆ. ಈ ಸಮಯದಲ್ಲಿ ದುಡ್ಡಿಗಿಂತ ಆ ಕಲಾಕೃತಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಠ ಅವರಲ್ಲಿ ಇರುತ್ತವೆ. ಅದೇ ರೀತಿ ಇದೀಗ ಈ ಬಾಳೆ ಹಣ್ಣು ಹರಾಜಾಗಿದೆ. ಇದು ಕೇವಲ ಒಂದು ಬಾಳೆಹಣ್ಣನ್ನು ಟೇಪ್​ ಹಚ್ಚಿ ಗೋಡೆ ಮೇಲೆ ಇಡಲಾಗಿದೆ ಅಷ್ಟೇ. ಆದರೂ ಹರಾಜಿನಲ್ಲಿ ಮಾರಾಟವಾಗಲು ಕಾರಣ ಇದು ಇಟಲಿಯ ಖ್ಯಾತ ಕಲಾವಿದ ಮೌರಿಜೀಯೋ ಕ್ಯಾಟೆಲನ್ (Maurizio Cattelan) ಎಂಬಾತನ ಕಲಾಕೃತಿ. ಇಲ್ಲಿಯವರೆಗೆ ಇತನ ಹಲವು ವಿಚಿತ್ರ ಎನಿಸುವ ಕಲಾಕೃತಿಗಳು ಭಾರಿ ಮೊತ್ತದಲ್ಲಿ ಹರಾಜಾಗಿವೆ.

ಮಾಧ್ಯಮ ವರದಿಗಳ ಪ್ರಕಾರ, ಇಂತಹ ಮೂರು ಬಾಳೆಹಣ್ಣಿನ ಕಲಾಕೃತಿಗಳಿವೆ. ಅವುಗಳಲ್ಲಿ ಎರಡು ಮಾರಾಟವಾಗಿವೆ. ಈ ಕಲಾಕೃತಿಯನ್ನು ಖರೀದಿಸಲು ಬಯಸುವ ಯಾರಾದರೂ ಹರಾಜು ಕೇಂದ್ರದ ಅಧಿಕೃತ ವೆಬ್‌ಸೈಟ್ www.sothebys.com ಗೆ ಭೇಟಿ ನೀಡುವ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದಾಗಿತ್ತು. ಆದರೆ ಈ ಹರಾಜಿನಲ್ಲಿ ಭಾಗವಹಿಸಲು ನವೆಂಬರ್ 20 ರವರೆಗೆ ಅಂದರೆ ಇಂದು ಕೊನೆಯ ದಿನವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net