ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿತ, ತಾಯಿ-ಮಗು ಸ್ಥಿತಿ ಗಂಭೀರ

metro
Published on

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಗೋವಿಂದಪುರ‌ ಠಾಣಾ ವ್ಯಾಪ್ತಿಯ ಎಚ್​ಬಿಆರ್ ಲೇಔಟ್ ಬಳಿ ಮಂಗಳವಾರ ಬೆಳಗ್ಗೆ ಕುಸಿದಿದೆ. ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿತ್ತು.

ಬೆಳಗ್ಗೆ 10.30 ಸುಮಾರಿನಲ್ಲಿ ರಸ್ತೆ ಮೇಲೆ ಮೆಟ್ರೋ ಪಿಲ್ಲರ್ ಬಿದ್ದಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಪತಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು ಸಿಲುಕಿದ್ದಾರೆ. ತಾಯಿ-ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ವಾಹನ ಸಂಚಾರ ಬಂದ್ ಆಗಿದ್ದು, ಟ್ರಾಫಿಕ್​ ಜಾಮ್​ ಉಂಟಾಗಿದೆ (ಇದು ಪ್ರಾಥಮಿಕ ಮಾಹಿತಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net